ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗೋಲಿಬಾರ್ ಗೆ 2 ವರ್ಷ; 'ಪ್ರತಿಭಟನಾ ಪ್ರದರ್ಶನ', ಘಟನೆಯ ಅಣಕು ಚಿತ್ರಣ

ಮಂಗಳೂರು: 2019ರ ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ಸಿಎಎ, ಎನ್ಆರ್ ಸಿ ವಿರುದ್ಧ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ ನಡೆದ ಗೋಲಿಬಾರ್ ಗೆ ಎರಡು ವರ್ಷ. ಈ ಪ್ರಯುಕ್ತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ 'ಪ್ರತಿಭಟನಾ ಪ್ರದರ್ಶನ' ನಡೆಸಲಾಯಿತು.

ಮುಖ್ಯಅತಿಥಿಯಾಗಿ ಆಗಮಿಸಿದ ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ ಮಾತನಾಡಿದರು. ಮಂಗಳೂರು ನಗರ ಜಿಲ್ಲಾಧ್ಯಕ್ಷ ಸರ್ಫುದ್ದೀನ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೋಡಿ, ಜಿಲ್ಲಾ ಮುಖಂಡರಾದ ಅರ್ಫೀದ್ ಅಡ್ಕಾರ್, ರಿಯಾಝ್ ಅಂಕತ್ತಡ್ಕ,ಅಶ್ಫಕ್ ಬಂಟ್ವಾಳ, ಫಯಾಝ್ ವಿಟ್ಲ, ಸರ್ಫರಾಝ್ ಅಂಗರಗುಂಡಿ, ಮುಕ್ತಾರ್ ಕಲ್ಲಡ್ಕ ಉಪಸ್ಥಿತರಿದ್ದರು.

ಜಿಲ್ಲಾ ಮುಖಂಡ ಶಂಸುದ್ದೀನ್ ನಿರೂಪಿಸಿದರು. ಇದೇ ವೇಳೆ ಪ್ರತಿಭಟನಾ ಸ್ಥಳದಲ್ಲಿ ಗೋಲಿಬಾರ್ ಘಟನೆಯ ಅಣಕು ಪ್ರದರ್ಶನ ನಡೆಯಿತು.

Edited By : Nagesh Gaonkar
Kshetra Samachara

Kshetra Samachara

20/12/2021 09:09 pm

Cinque Terre

5.61 K

Cinque Terre

0

ಸಂಬಂಧಿತ ಸುದ್ದಿ