ಮಂಗಳೂರು: ಎರಡು ವರ್ಷಗಳ ಹಿಂದೆ ಮಂಗಳೂರು ನಗರದ ಬಂದರ್ ಪ್ರದೇಶದ ಅಜೀಜುದ್ದೀನ್ ರಸ್ತೆಯಲ್ಲಿ ನಡೆದ ಗೋಲಿಬಾರ್ ಕೃತ್ಯ ಖಂಡಿಸಿ ನಿನ್ನೆ ರಾತ್ರಿ ಸಮಾನ ಮನಸ್ಕರು ಮೊಂಬತ್ತಿ ಉರಿಸಿ, ಪೊಲೀಸ್ ಗುಂಡಿಗೆ ಬಲಿಯಾದವರನ್ನು ಸ್ಮರಿಸಿದರು.
ಗುಂಡೇಟಿಗೆ ಜಲೀಲ್ ಬಲಿಯಾದ ಸ್ಥಳದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಎಸ್ಐಒ ಜಿಲ್ಲಾಧ್ಯಕ್ಷ ನಿಹಾಲ್ ಕುದ್ರೋಳಿ, ಸಾಮಾಜಿಕ ಹೋರಾಟಗಾರ ಶಬೀರ್ ಅಹ್ಮದ್, ಎಪಿಸಿಆರ್ ಜಿಲ್ಲಾ ಕಾರ್ಯದರ್ಶಿ ಇರ್ಷಾದ್ ವೇಣೂರ್ ಮಾತನಾಡಿದರು. ಬಂದರ್ ಪ್ರದೇಶದ ನಾಗರಿಕರು, ಜಿಐಒ ಮಾಜಿ ರಾಜ್ಯಾಧ್ಯಕ್ಷೆ ಉಮೈರಾ ಬಾನು, ಎಸ್ಐಒ ಮಂಗಳೂರು ನಗರಾಧ್ಯಕ್ಷ ಸಲ್ಮಾನ್ ಕುದ್ರೋಳಿ, ಮೊಹ್ಸಿನ್ ಕಂದಕ್, ಮೆಹರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
20/12/2021 03:30 pm