ಮುಲ್ಕಿ: ಪಡುಪಣಂಬೂರು ಹಾಗೂ ಕಿನ್ನಿಗೋಳಿ-ಕಟೀಲು ಮೂಡಬಿದ್ರೆ ಸಂಪರ್ಕಿಸುವ ಕಲ್ಲಾಪು ಕಿರುಸೇತುವೆಯನ್ನು ಭಾನುವಾರ ಶಾಸಕ ಉಮಾನಾಥ ಕೋಟ್ಯಾನ್ ಲೋಕಾರ್ಪಣೆಗೊಳಿಸಿದರು. ಸುಮಾರು 20 ಲಕ್ಷ ವೆಚ್ಚದಲ್ಲಿ ನೂತನ ಸೇತುವೆ ಕಾಮಗಾರಿ ನಡೆದಿದ್ದು ಶಾಸಕರು ಕಾಮಗಾರಿಯನ್ನು ಪರಿಶೀಲಿಸಿದರು.
ಈ ಸಂದರ್ಭ ಅವರು ಮಾತನಾಡಿ ಮುಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿದ್ದು ಗ್ರಾಮಸ್ಥರ ಸಹಕಾರ ಅಗತ್ಯ ಎಂದರು. ಈ ಸಂದರ್ಭ ಸ್ಥಳೀಯರು ಸೇತುವೆಯ ಬದಿಯಲ್ಲಿರುವ ವಿದ್ಯುತ್ ಕಂಬ ಹಾಗೂ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಶಾಸಕರು ಗುತ್ತಿಗೆದಾರರಿಗೆ ಕೂಡಲೇ ವಿದ್ಯುತ್ ಕಂಬ ತೆರವುಗೊಳಿಸಲು ಸೂಚನೆ ನೀಡಿದರು.ಈ ಸಂದರ್ಭ ಪಡುಪಣಂಬೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮ ಚಂದ್ರಶೇಖರ್,ಸದಸ್ಯ ಹರಿಪ್ರಸಾದ್, ಸ್ಥಳೀಯರಾದ ವಿಜಯಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು.
ಸೇತುವೆ ನಿಧಾನಗತಿ ಹಾಗೂ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಅನೇಕ ಬಾರಿ ಸಂಬಂಧಪಟ್ಟವರನ್ನು ಎಚ್ಚರಿಸಿತ್ತು. ಇದೀಗ ಸಂಬಂಧಪಟ್ಟವರು ಎಚ್ಚೆತ್ತು ತಾತ್ಕಾಲಿಕ ಮಟ್ಟಿಗೆ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಸ್ಥಳೀಯರು ನಿಟ್ಟುಸಿರುಬಿಡುವಂತಾಗಿದೆ.
Kshetra Samachara
19/12/2021 05:48 pm