ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಉಪ್ಪಿನಂಗಡಿ ಲಾಠಿಚಾರ್ಜ್ ಖಂಡಿಸಿ ಪಿಎಫ್ ಐ ಬೃಹತ್ ಪ್ರತಿಭಟನೆ

ಮಂಗಳೂರು: ಉಪ್ಪಿನಂಗಡಿಯಲ್ಲಿ ನಡೆದ ಲಾಠಿಚಾರ್ಜ್‌ ಖಂಡಿಸಿ ಮಂಗಳೂರು ನಗರದ ಕ್ಲಾಕ್‌ ಟವರ್‌ ಬಳಿ ಪಿಎಫ್ ಐ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಗೆ ಖುದ್ದು ಎಸ್‌ಪಿ ಖುಷಿಕೇಶ್‌ ಸೋನಾವಣೆ ಭೇಟಿ ನೀಡಿ ಪ್ರತಿಭಟನಾಕಾರರ ಬೇಡಿಕೆಗೆ ಒಪ್ಪಿದ್ದಾರೆ. ಉಪ್ಪಿನಂಗಡಿಯಲ್ಲಿ ನಡೆದ ಲಾಠಿಚಾರ್ಜ್‌ನಲ್ಲಿ ತಪ್ಪಿತಸ್ಥ ಪೊಲೀಸ್‌ ಸಿಬ್ಬಂದಿಯನ್ನು ಅಮಾನತು ಮಾಡಬೇಕು. ಜೊತೆಗೆ ಘಟನೆಯ ಸತ್ಯಾಸತ್ಯತೆ ಸಾರ್ವಜನಿಕರ ಮುಂದಿಡಬೇಕು.

ಅಮಾಯಕರ ಮೇಲಿನ ಕೇಸ್‌ ಹಿಂಪಡೆಯಬೇಕು, ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಬೇಕು ಎಂದು ಬೇಡಿಕೆ ಸಲ್ಲಿಸಿದರು.

ಈ ವೇಳೆ ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಭೇಟಿ ನೀಡಿ, ಎಸ್‌ಪಿ ಸ್ಥಳಕ್ಕೆ ಬರುತ್ತಾರೆಂಬ ಭರವಸೆ ನೀಡಿದ್ದರು.

ನಂತರ ಸ್ಥಳಕ್ಕೆ ಬಂದ ಎಸ್‌ಪಿ ಪ್ರತಿಭಟನಾಕಾರರ ಬೇಡಿಕೆ ಆಲಿಸಿ, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Edited By : Nagesh Gaonkar
Kshetra Samachara

Kshetra Samachara

17/12/2021 06:33 pm

Cinque Terre

8.62 K

Cinque Terre

0

ಸಂಬಂಧಿತ ಸುದ್ದಿ