ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ಪುರಸಭೆ ಚುನಾವಣೆ 20 ನಾಮಪತ್ರ ಸಲ್ಲಿಕೆ , ಗರಿ ಗೆದರಿದ ಲೋಕಲ್ ಫೈಟ್

ಕಾಪು : ಡಿಸೆಂಬರ್ 27ರಂದು ನಡೆಯಲಿರುವ ಪುರಸಭೆಯ ಚುನಾವಣೆಗೆ 23 ಸ್ಥಾನಗಳಿಗೆ ಒಟ್ಟು 70 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ,ಜೆಡಿಎಸ್, ಎಸ್ಡಿಪಿಐ ಮತ್ತು ಪಕ್ಷೇತರ ಅಭ್ಯರ್ಥಿಯೊಂದಿಗೆ ಇಬ್ಬರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ 25,ಬಿಜೆಪಿ 23, ಜೆಡಿಎಸ್ 8, ಎಸ್ಡಿಪಿಐ 9, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ 2 ಹಾಗೂ 3 ಮಂದಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಎಲ್ಲಾ 70 ನಾಮಪತ್ರಗಳು ಸ್ವೀಕೃತ ಗೊಂಡಿವೆ.

ಭಾರತ್ ನಗರ,ಬಡಗರ ಗುತ್ತು, ಕೊಂಬಗುಡ್ಡೆ ವಾರ್ಡ್ಗಳಲ್ಲಿ ಅತೀ ಹೆಚ್ಚು ತಲಾ ಐದು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಡಿಸೆಂಬರ್ 18 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು ಬಳಿಕವಷ್ಟೇ ಅಂತಿಮವಾಗಿ ಎಷ್ಟು ಮಂದಿ ಸ್ಪರ್ಧೆಯಲ್ಲಿ ಇರುತ್ತಾರೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ.

Edited By : Shivu K
Kshetra Samachara

Kshetra Samachara

17/12/2021 03:59 pm

Cinque Terre

8.42 K

Cinque Terre

0

ಸಂಬಂಧಿತ ಸುದ್ದಿ