ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಿಷತ್ ಫೈಟ್ : ದ.ಕನ್ನಡದಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಮಂಜುನಾಥ್ ಭಂಡಾರಿಗೆ ಗೆಲವು

ಮಂಗಳೂರು ; ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮಂಜುನಾಥ್ ಭಂಡಾರಿ ಗೆಲುವಿನ ನಗೆ ಬೀರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಪರಿಷತ್ ಚುನಾವಣೆಯಲ್ಲಿ ಒಟ್ಟು 6,011 ಮತಗಳ ಪೈಕಿ ಕೋಟ ಶ್ರೀನಿವಾಸ ಪೂಜಾರಿಯವರು ಒಟ್ಟು 3672 ಮತ ಪಡೆದಿದ್ದಾರೆ. ಮಂಜುನಾಥ ಭಂಡಾರಿ ಒಟ್ಟು 2,079 ಮತ ಪಡೆದಿದ್ದಾರೆ.

ಹಾಗೆಯೇ ಎಸ್ ಡಿಪಿಯ್ ಪಕ್ಷದ ಶಾಫಿ ಕೆ 204 ಮತ ಪಡೆದಿದ್ದಾರೆ. ಇನ್ನು ಮತ ಏಣಿಕೆ ಪ್ರಕ್ರಿಯೆ ಮುಂದುವರೆದಿದೆ.ಒಟ್ಟು ಚಲಾವಣೆಯಾದ ಮತಗಳಲ್ಲಿ 5955 ಮತ ಸಿಂಧುವಾಗಿದೆ. 56 ಮತಗಳು ಅಸಿಂಧುವಾಗಿದೆ. ಕೋಟ ಶ್ರೀನಿವಾಸ ಪೂಜಾರಿ ಈ ಗೆಲುವಿನಿಂದ ಸತತ ನಾಲ್ಕನೇ ಬಾರಿ ಪರಿಷತ್ ಪ್ರವೇಶ ಮಾಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

14/12/2021 01:03 pm

Cinque Terre

7.9 K

Cinque Terre

0

ಸಂಬಂಧಿತ ಸುದ್ದಿ