ಉಡುಪಿ: ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ ಇದೊಂದು ಐತಿಹಾಸಿಕ ಅಧಿವೇಶನವಾಗಲಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಬೆಳಗಾವಿಯಲ್ಲಿ ಅಧಿವೇಶನ ಪ್ರಾರಂಭವಾಗುತ್ತಿದೆ.ಮತಾಂತರ ನಿಷೇಧ ಕಾನೂನು ಜಾರಿಗೆ ಬರಬೇಕು ಎಂಬ ನಿರೀಕ್ಷೆಯಲ್ಲಿದ್ದೇವೆ. ಮಂಗಳೂರು -ಉಡುಪಿ ಭಾಗದಲ್ಲಿ ನಡೆಯುತ್ತಿರುವ ಮತಾಂತರ ಪ್ರಕರಣವನ್ನು ನೋಡಿದ್ದೇವೆ. ಹಾಗಾಗಿ ಶೀಘ್ರ ಕಾಯ್ದೆ ಜಾರಿಯಾಗುವ ಅಗತ್ಯವಿದೆ.
ಕಾಯ್ದೆ ಜಾರಿಯಾಗುತ್ತದೆ ಅನ್ನೋ ವಿಶ್ವಾಸವಿದೆ ಎಂದರು. ಕಾಂಗ್ರೆಸ್ ನವರು ಓಟ್ ಬ್ಯಾಂಕಿಗೋಸ್ಕರ ವಿರೋಧ ಮಾಡುತ್ತಿದ್ದಾರೆ. ಈ ಹಿಂದಿನಿಂದಲೂ ಕಾಂಗ್ರೆಸ್ನವರು ಇದನ್ನೇ ಮಾಡಿಕೊಂಡು ಬಂದಿದ್ದಾರೆ.ಮತಾಂತರ ನಿಷೇಧ ಒಂದು ರಾಷ್ಟ್ರೀಯ ವಿಚಾರ.ರಾಷ್ಟ್ರೀಯ ವಿಚಾರ ಎನ್ನುವ ಕಾರಣಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತದೆ. ಗೋಹತ್ಯೆ ಕಾಯ್ದೆಗೂ ಕಾಂಗ್ರೆಸ್ ವಿರೋಧ ಮಾಡಿದೆ.ನಮಗೆ ಬಹುಮತ ಇದೆ. ನಾವು ಕಾನೂನು ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Kshetra Samachara
13/12/2021 01:16 pm