ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಿಪಿನ್ ರಾವತ್ ಸಾವಿಗೆ ಸಂಭ್ರಮಿಸುವವರನ್ನು ಗಡಿಯಾಚೆಗೆ ಅಟ್ಟಿ; ಖಾದರ್ ಕಿಡಿ

ಮಂಗಳೂರು: ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ ಸಿಡಿಎಸ್ ಜ. ಬಿಪಿನ್ ರಾವತ್ ಅವರ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುವ ವಿಕೃತರ ವಿರುದ್ದ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲೇ ಬೇಕು ಎಂದು ಉಳ್ಳಾಲ ಶಾಸಕ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಶಾಸಕರು, ಸರ್ಕಾರ ಕೇವಲ ಬಾಯಿಮಾತಿನ ಎಚ್ಚರಿಕೆ ನೀಡುವ ಬದಲು ಸಮಗ್ರವಾಗಿ ತನಿಖೆ ನಡೆಸಿ ಈ ಅತಿರೇಖಿಗಳನ್ನು ಗಡಿಯಾಚೆಗೆ ಅಟ್ಟಲಿ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವಿಷ ಉಣಿಸುವ ದೇಶದ್ರೋಹಿಗಳ ಮುಖವಾಡ ಕಳಚಿ ಬೀಳಲಿ ಎಂದು ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

11/12/2021 11:03 pm

Cinque Terre

4.67 K

Cinque Terre

3

ಸಂಬಂಧಿತ ಸುದ್ದಿ