ಗುರುಪುರ:ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ತಮ್ಮ ವಿಧಾನಸಭಾ ಕ್ಷೇತ್ರದ ನಾಗರಿಕರ ಅನುಕೂಲತೆಗಾಗಿ ಆಗಬೇಕಾದ ಹಲವು ಸುಧಾರಣಾ ಕ್ರಮಗಳ ಬಗ್ಗೆ ಮನವಿ ಸಲ್ಲಿಸಿದರು.
ಗುರುಪುರ ಹೋಬಳಿಯ ವ್ಯಾಪ್ತಿಯಲ್ಲಿರುವ ಅಡ್ಯಾರ್ ಗ್ರಾಮವನ್ನು ಮಂಗಳೂರು 'ಎ' ಗೆ ಸ್ಥಳಾಂತರಿಸಿದರೆ ನಾಗರಿಕರಿಗೆ ಆಗುವ ಪ್ರಯೋಜನಗಳು, ಮರಕಡ ಗ್ರಾಮವನ್ನು ಕಾವೂರು ವ್ಯಾಪ್ತಿಗೆ ಸ್ಥಳಾಂತರಿಸುವುದು, ಕಾವೂರು ಗ್ರಾಮ ಕರಣಿಕರ ಕಚೇರಿ ಸ್ಥಾಪನೆ, ಅಟಲ್ ಜೀ ಜನಸ್ನೇಹಿ ಕೇಂದ್ರದ ನೂತನ ಉಪಚೇರಿಗೆ ಹೊಸ ವ್ಯವಸ್ಥೆಯನ್ನು ಒದಗಿಸುವುದು ಸಹಿತ ಅನೇಕ ವಿಷಯಗಳ ಬಗ್ಗೆ ಸಚಿವರ ಗಮನ ಸೆಳೆದು ಮನವಿ ಸಲ್ಲಿಸಿದರು.
Kshetra Samachara
03/12/2021 08:08 pm