ಉಡುಪಿ: ಹಿಂದುಳಿದ ವರ್ಗಗಳ ಹಾಸ್ಟೆಲ್ ನಲ್ಲಿ ಅಡುಗೆ ಸಾಮಗ್ರಿ ಪೂರೈಕೆಯಲ್ಲಿ ಲೋಪ ವಿಚಾರವಾಗಿ ಉಡುಪಿಯಲ್ಲಿ
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಟೆಂಡರ್ ಗಳಲ್ಲಿ ಲೋಪದೋಷ, ಅಕ್ರಮ ಗುತ್ತಿಗೆ, ಮಕ್ಕಳಿಗೆ ಕಳಪೆ ಆಹಾರ ವಿತರಣೆ ಆರೋಪ ಬಂದಿರುವುದು ನಿಜ.ಈ ಸಂಬಂಧ
ತಕ್ಷಣ ತನಿಖೆ ನಡೆಸಲು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ.
ಎಸಿಬಿ ಮೂಲಕ ತನಿಖೆ ನಡೆಸಲು ಸೂಚಿಸಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
ತುಮಕೂರು ಸೇರಿದಂತೆ ಅಕ್ರಮ ನಡೆದಿರುವ ಜಿಲ್ಲೆಗಳಲ್ಲಿ ಅಧಿಕಾರಿಗಳ ಅಮಾನತು ಮಾಡಲಾಗಿದೆ.
ತನಿಖೆ ಆಧಾರದಲ್ಲಿ ಸೂಕ್ತ -ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ.ಎಲ್ಲ ಪ್ರಕರಣಗಳ ಎಸಿಬಿ ತನಿಖೆಗೆ ಸೂಚಿಸಿದ್ದೇನೆ.
ಈ ಕುರಿತು ಮುಖ್ಯಮಂತ್ರಿಗಳ ಜೊತೆಗೂ ದೂರವಾಣಿಯಲ್ಲಿ ಮಾತನಾಡಿದ್ದೇನೆ.ಮಕ್ಕಳ ಆಹಾರ ವಿಚಾರದಲ್ಲಿ ಪಾರದರ್ಶಕತೆ ಪಾಲಿಸುತ್ತೇವೆ ಎಂದು ಹೇಳಿದ್ದಾರೆ.
ತೀರ್ಥಹಳ್ಳಿಯಲ್ಲಿ ಗೋರಕ್ಷಕರ ಮೇಲೆ ದಾಳಿ ವಿಚಾರವಾಗಿ ಮಾತನಾಡಿದ ಸಚಿವರು,
ನಮ್ಮ ಸರ್ಕಾರ ಗೋರಕ್ಷಣೆ ಮಾಡಲೆಂದೇ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದಿದೆ.
ಈ ಕಾಯ್ದೆ ಊರ್ಜಿತದಲ್ಲಿದೆ. ಅಕ್ರಮ ಗೋಸಾಗಾಟ ತಡೆಗಟ್ಟುವುದು ನಮ್ಮ ಜವಾಬ್ದಾರಿ.
ನಮ್ಮ ಸರಕಾರ ಅಧಿಕಾರದಲ್ಲಿದ್ದರೂ, ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ
ಕೆಟ್ಟ ಶಕ್ತಿಗಳು ಅಕ್ರಮ ಗೋ ಮಾರಾಟದಲ್ಲಿ ತೊಡಗಿವೆ ಎಂದ ಅವರು,ಕಾನೂನಿಗೆ ಸವಾಲು ಒಡ್ಡಿ, ಎದುರು ಬಂದವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಕೊಲೆಯತ್ನ ,ಕತ್ತಿ ತೋರಿಸಿ ಬೆದರಿಕೆಯೊಡ್ಡುತ್ತಿದ್ದಾರೆ. ನಮ್ಮ ಸರಕಾರ ಯಾವುದಕ್ಕೂ ಬಗ್ಗುವುದಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.ತೀರ್ಥಹಳ್ಳಿ ಪ್ರಕರಣದ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸುತ್ತೇವೆ.ಗೋವಿನ ಹೆಸರಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುವುದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಮಕ್ಕಳಿಗೆ ಮೊಟ್ಟೆ ನೀಡುವ ವಿಚಾರವಾಗಿ ಮಾತನಾಡಿದ ಸಚಿವರು,ಈ ವಿಚಾರದಲ್ಲಿ ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ.
ಮೊಟ್ಟೆ ನೀಡುವ ಯೋಜನೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
Kshetra Samachara
02/12/2021 03:41 pm