ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: "ವಿಚಾರವಾದಿಗಳ ವಿರುದ್ಧ ದೇಶದ್ರೋಹದ ಕೇಸು, ಬಂಧನ"

ಪುತ್ತೂರು: ದೇಶದಲ್ಲಿ ಇಂದು ವಿಚಾರವಾದಿಗಳ ವಿರುದ್ಧ ದೇಶದ್ರೋಹದ ಕೇಸು ದಾಖಲಿಸುವ ಮೂಲಕ ವಿಚಾರವಾದಿಗಳನ್ನು ಮಟ್ಟ ಹಾಕುವ ಕೆಲಸ ನಡೆಯುತ್ತಿದೆ ಎಂದು ದಲಿತ ಸಂಘಟನೆಯ ರಾಜ್ಯ ಮುಖಂಡ ಭಾಸ್ಕರ್ ಪ್ರಸಾದ್ ಹೇಳಿದರು.

ಪುತ್ತೂರಿನಲ್ಲಿ ನಡೆದ 'ಸಂವಿಧಾನದ ಅನಿವಾರ್ಯತೆ' ವಿಷಯದ ವಿಚಾರ ಮಂಡನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಭಯೋತ್ಪಾದನೆ ನಿಗ್ರಹ ಕಾಯ್ದೆಗಳನ್ನು ದುರುಪಯೋಗಪಡಿಸುವ ಕಾರ್ಯ ನಡೆಯುತ್ತಿದೆ ಎಂದ ಅವರು, ವಿಚಾರವಾದಿಗಳಾದ ವರವರ ರಾವ್ ಮುಂತಾದವರನ್ನು ದೇಶದ್ರೋಹದ ಆರೋಪದಡಿ ಬಂಧಿಸುವ ಕೃತ್ಯ ನಡೆಯುತ್ತಿದೆ. ಸಾಹಿತಿ, ಹೋರಾಟಗಾರರನ್ನೂ ಬಂಧಿಸಲಾಗುತ್ತಿದೆ.

ಇಂದು ಸಂವಿಧಾನವನ್ನು, ಕಾನೂನನ್ನು ದುರುಪಯೋಗಪಡಿಸುವ ಪ್ರಯತ್ನ ನಿರಂತರ ನಡೆಯುತ್ತಿದೆ ಎಂದರು.

ಎಸ್ ಡಿಪಿಐ ಮುಖಂಡರಾದ ಆನಂದ ಮಿತ್ತಬೈಲ್, ವಿಕ್ಟರ್ ಮಾರ್ಟಿನ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

18/11/2021 02:58 pm

Cinque Terre

23.38 K

Cinque Terre

2

ಸಂಬಂಧಿತ ಸುದ್ದಿ