ಉಡುಪಿ: ಜಿಲ್ಲಾಸ್ಪತ್ರೆ ಮುಂದೆ ನಡೆಯುತ್ತಿದ್ದ ಮೂರು ದಿನಗಳ ಸತ್ಯಾಗ್ರಹ ಕೊನೆಗೊಂಡಿದೆ. ಇವತ್ತು ಸ್ಥಳಕ್ಕೆ ಆಗಮಿಸಿ ಸತ್ಯಾಗ್ರಹ ನಿಲ್ಲಿಸುವಂತೆ ಮನವಿ ಮಾಡಿದ ಜಿಲ್ಲಾ ಸರ್ಜನ್ ಡಾ. ಮಧುಸೂದನ್ "ಸಿಬ್ಬಂದಿ ವೇತನ ಮತ್ತು ಡಯಾಲಿಸಿಸ್ ಕೇಂದ್ರದ ಅಗತ್ಯ ಸಾಮಗ್ರಿ ಖರೀದಿಗಾಗಿ ಸುಮಾರು 13 ಲಕ್ಷ ರೂ.ವನ್ನು ಸರಕಾರ ಈಗಾಗಲೇ ನಮ್ಮ ಖಾತೆಗೆ ಜಮಾ ಮಾಡಿದೆ. ಇದರಲ್ಲಿ ಸಿಬ್ಬಂದಿ ವೇತನ ಶೀಘ್ರ ನೀಡಲಾಗುವುದು" ಎಂದು ತಿಳಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ "ಕಳೆದ ಮೂರು ದಿನಗಳಿಂದ ನಾವು ನಡೆಸುತಿದ್ದ ಅಹೋರಾತ್ರಿ ಧರಣಿಗೆ ಇದೀಗ ಜಯ ಸಿಕ್ಕಿದೆ. ಸರಕಾರ ಈಗಾಗಲೇ ರಾಜ್ಯದ ಎಲ್ಲ ಡಯಾಲಿಸಿಸ್ ಕೇಂದ್ರಗಳಿಗೆ ಸಿಬ್ಬಂದಿ ವೇತನ ಮತ್ತು ಅಗತ್ಯ ವಸ್ತು ಖರೀದಿಗೆ ಹಣ ಬಿಡುಗಡೆ ಮಾಡಿದೆ. ಹೀಗಾಗಿ ನಾವು ನಮ್ಮ ಧರಣಿಯನ್ನು ಈ ಕ್ಷಣದಿಂದ ಹಿಂಪಡೆಯುತ್ತಿದ್ದೇವೆ" ಎಂದರು.
Kshetra Samachara
18/11/2021 02:54 pm