ಮಂಗಳೂರು: ಕೋಡಿಕಲ್ ನಲ್ಲಿ ನಾಗನ ಕಟ್ಟೆಗೆ ಹಾನಿ ಎಸಗಿದ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ಕೋಡಿಕಲ್ ಬಂದ್ ಗೆ ಹಿಂದೂ ಪರ ಸಂಘಟನೆಗಳು ಕರೆ ನೀಡಿತ್ತು. ಬಂದ್ ಹಿನ್ನೆಲೆಯಲ್ಲಿ ಸಂಚರಿಸುತ್ತಿರುವ ವಾಹನಗಳನ್ನು ಕಾರ್ಯಕರ್ತರು ತಡೆದಿದ್ದಾರೆ.
ತನ್ನನ್ನು ತಡೆದು ನಿಲ್ಲಿಸಿದ ಕಾರಣ ಬೈಕ್ ಸವಾರನೊಬ್ಬ ಆಕ್ಷೇಪ ವ್ಯಕ್ತಪಡಿಸಿ, ವಾಗ್ವಾದಕ್ಕಿಳಿದಿದ್ದಾನೆ. ಆಗ ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು. ಬಳಿಕ ಪೊಲೀಸರು, ಯುವಕನ ವಾಹನ ತಿರುಗಿಸಿ ಬೇರೆ ರಸ್ತೆಯಲ್ಲಿ ಕಳುಹಿಸಿದ್ದಾರೆ.
Kshetra Samachara
15/11/2021 04:14 pm