ಬಜಪೆ : ಅನಾರೋಗ್ಯದಿಂದ ಬಳಲುತ್ತಿರುವ, ಕಿಲೆಂಜಾರು ಗ್ರಾಮದ ಬಿಜೆಪಿಯ ಹಿರಿಯ ಕಾರ್ಯಕರ್ತ ಲೋಕೇಶ್ ಪೂಜಾರಿ ಬಳ್ಳಿ ಇವರ ಮನೆಗೆ ಶಾಸಕ ಭರತ್ ಶೆಟ್ಟಿ ಅವರು ಲೋಕೇಶ್ ಅವರ ಆರೋಗ್ಯ ವಿಚಾರಿಸಿದರು.
ಈ ವೇಳೆ ಕುಪ್ಪೆಪದವು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ, ಉತ್ತರ ಮಂಡಲ ಕಾರ್ಯದರ್ಶಿ ಗಣೇಶ್ ಪಾಕಜೆ, ಕುಪ್ಪೆಪದವು ಗ್ರಾಮ ಪಂಚಾಯತ್ ಸದಸ್ಯ ನಿತೇಶ್ ಕುಮಾರ್ ದೊಡ್ಡಳಿಕೆ, ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ, ಸದಸ್ಯ ರುಕ್ಮಯ ನಾಯ್ಕ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜನಾರ್ಧನ ಗೌಡ, ಎಡಪದವು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಕುಮಾರ್ ಎಂ. ಹಿರಿಯರಾದ ರಾಮಚಂದ್ರ ಸಾಲಿಯಾನ್ ತಾಳಿಪಾಡಿ, ಪಕ್ಷದ ವಿವಿಧ ಪದಾಧಿಕಾರಿಗಳು, ಹಾಗೂ ಪಕ್ಷದ ಕಾರ್ಯಕರ್ತರು ಶಾಸಕರ ಜತೆಗಿದ್ದರು.
Kshetra Samachara
10/11/2021 07:54 am