ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಬ್ರಹ್ಮಣ್ಯ: ಪೊಲೀಸ್ ಠಾಣೆ ಕಾಮಗಾರಿ ಶೀಘ್ರ ಆರಂಭ; ಆರಗ ಜ್ಞಾನೇಂದ್ರ

ಸುಬ್ರಹ್ಮಣ್ಯ: ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಬಲವರ್ಧನೆಗೆ ನಮ್ಮ ಸರಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. 100 ಠಾಣೆಗಳ ಹೊಸ ಕಟ್ಟಡಕ್ಕೆ 200 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುವುದು. ಸುಬ್ರಹ್ಮಣ್ಯ ಠಾಣೆಗೂ 1 ಕೋಟಿ ರೂ. ಅನುದಾನ ಇಡಲಾಗಿದ್ದು, ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಅವರು ಸೋಮವಾರ ರಾತ್ರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಪತ್ರಕರ್ತ ರೊಂದಿಗೆ ಮಾತನಾಡಿದರು. ಪೊಲೀಸರಿಗೆ ಗೃಹ 20-25 ಯೋಜನೆಯಲ್ಲಿ 2025ನೇ ಇಸವಿವರೆಗೆ 10 ಸಾವಿರ ಮನೆಗಳ ನಿರ್ಮಾಣವಾಗಲಿದೆ. ಅಲ್ಲಿಗೆ ವಸತಿ ಸಮಸ್ಯೆ ನಿವಾರಣೆಯಾಗುತ್ತದೆ. ಇಲಾಖೆಯಲ್ಲಿ ವಾರ್ಷಿಕ 4 ಸಾವಿರ ನೇಮಕಾತಿ ನಡೆಸಲಾಗುತ್ತಿದೆ. ಈಗ ಕೇವಲ 12 ಸಾವಿರ ಹುದ್ದೆಗಳು ಖಾಲಿ ಇವೆ ಎಂದರು.

ಗೋಹತ್ಯೆ ನಿಷೇಧ ಕಾಯಿದೆ ಈಗಾಗಲೇ ಜಾರಿಯಲ್ಲಿದ್ದು, ಹೊಸ ಕಾಯಿದೆಯಂತೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರೂ ಸಹಕರಿಸಬೇಕು. ವೀರ ಸಾವರ್ಕರ್ ಬಹು ದೊಡ್ಡ ಸ್ವಾತಂತ್ರ್ಯ ಯೋಧರು. ಅಂತಹವರ ಸ್ಮಾರಕ ಕಟ್ಟುವುದನ್ನು ವಿರೋಧಿಸುವವರು ಈ ದೇಶದ ವ್ಯವಸ್ಥೆಯನ್ನೇ ವಿರೋಧಿಸಿದಂತೆ ಎಂದರು.

* ಆತ್ಮಹತ್ಯೆ ಪರಿಹಾರವಲ್ಲ; ಪುನೀತ್ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಪರಿಹಾರವಲ್ಲ. ಪುನೀತ್ ರಾಜ್‌ಕುಮಾರ್ ಪ್ರಚಾರ ಬಯಸದೆ ಉತ್ತಮ ಕೆಲಸ ಮಾಡಿದ್ದಾರೆ. ಅಂತಹ ಕೆಲಸಗಳನ್ನು ನಾವೆಲ್ಲ ಮಾಡಿಕೊಂಡು ಪುನೀತ್ ಆತ್ಮಕ್ಕೆ ಶಾಂತಿ ಕೋರೋಣ ಎಂದರು.

Edited By : Manjunath H D
Kshetra Samachara

Kshetra Samachara

09/11/2021 12:55 pm

Cinque Terre

5.85 K

Cinque Terre

0