ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ತೈಲ ಬೆಲೆ ಸುಂಕ ಇಳಿಕೆಯಾಗಿಲ್ಲ"

ಮಂಗಳೂರು: ಕೇಂದ್ರ ಸರಕಾರ ತೈಲ ಬೆಲೆಯನ್ನು ಇಳಿಕೆ ಮಾಡಿದರೂ, ತೈಲ ಬೆಲೆಯೇರಿಕೆಯನ್ನು ಇಳಿಸಬೇಕೆಂದು ಪಾದಯಾತ್ರೆ, ಪ್ರತಿಭಟನೆ ಮಾಡಿರುವ ಕಾಂಗ್ರೆಸ್ ಆಡಳಿತ ಇರುವ ಯಾವುದೇ ರಾಜ್ಯದಲ್ಲಿ ತೈಲ ಬೆಲೆಯ ಸುಂಕ ಇಳಿಕೆಯಾಗಿಲ್ಲ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಟೀಕಿಸಿದ್ದಾರೆ.

ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಅಟಲ್ ಕೇಂದ್ರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಇರುವ 12 ರಾಜ್ಯಗಳಲ್ಲಿ, 6 ಎನ್ ಡಿಎ ಅಧಿಕಾರದ ರಾಜ್ಯಗಳಲ್ಲಿ ಕೇಂದ್ರ ಸರಕಾರ ತೈಲಬೆಲೆ ಇಳಿಸಿದ ತಕ್ಷಣ ಸುಂಕವನ್ನು ಇಳಿಸಲಾಗಿತ್ತು. ಆದರೆ, ಈ ಬಗ್ಗೆ ಅಪಪ್ರಚಾರ ಮಾಡಿ ತೈಲಬೆಲೆ ಏರಿಕೆಯ ಬಗ್ಗೆ ಪ್ರತಿಭಟನೆ, ಹೋರಾಟ ಮಾಡಿದ ಕಾಂಗ್ರೆಸ್ ಬೆಲೆ ಇಳಿಕೆ ಮಾಡುವುದು ಕಾಣುತ್ತಿಲ್ಲ ಎಂದರು‌.

ಕಮ್ಯುನಿಸ್ಟ್ ಆಡಳಿತದಲ್ಲಿರುವ ನೆರೆಯ ಕೇರಳದಲ್ಲಿ ತೈಲ ಬೆಲೆ ಇನ್ನೂ ಇಳಿಕೆಯಾಗಿಲ್ಲ. ಕೇರಳದ ಕಾಸರಗೋಡು ಪ್ರದೇಶದವರು ಗಡಿದಾಟಿ ಕರ್ನಾಟಕದಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹೋಗುತ್ತಿದ್ದಾರೆ. ಅಲ್ಲಿ ಪೆಟ್ರೋಲ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಸುದರ್ಶನ್ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

08/11/2021 10:11 pm

Cinque Terre

13.58 K

Cinque Terre

2

ಸಂಬಂಧಿತ ಸುದ್ದಿ