ಮಹಾನಗರ:ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ದೇರೆಬೈಲು ಉತ್ತರ 17ನೇ ವಾರ್ಡಿನ ಕೋಡಿಕಲ್ ಕಟ್ಟೆ ಮೈದಾನದಲ್ಲಿ ಶನಿವಾರ *ದೇರೆಬೈಲು ಉತ್ತರ 17ನೇ ವಾರ್ಡ್ ಮತ್ತು ನವಭಾರತ ಇದರ ಆಶ್ರಯದಲ್ಲಿ ಸರಕಾರದ ವಿವಿಧ ಯೋಜನೆಗಳ ಕಾರ್ಯಕ್ರಮವನ್ನು ಶಾಸಕರಾದ ಡಾ. ಭರತ್ ಶೆಟ್ಟಿ ವೈ ಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಮನೋಜ್ ಕುಮಾರ್ ಕೋಡಿಕಲ್,16ನೇ ವಾರ್ಡ್ ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕರಾದ ಅಜಿತ್ ಕುಮಾರ್ ಉಳ್ಳಾಲ್, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಸಹ ಸಂಚಾಲಕರಾದ ಕಿಶೋರ್ ಬಾಬು, ನಗರ ಪಂಚಾಯತ್ ಪ್ರಕೋಷ್ಟದ ಸದಸ್ಯ ಲೋಕನಾಥ್ ಬಂಗೇರ, ಹಿಂದೂ ಧಾರ್ಮಿಕ ಸೇವಾ ಸಮಿತಿ ಕೊಟ್ಟಾರ ಇದರ ಅಧ್ಯಕ್ಷರಾದ ಸುನೀಲ್ ಪಾಲ್ದಾಡಿ, ಗಣ್ಯರು ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
06/11/2021 04:12 pm