ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಮೂಲತ್ವ ವಿಶ್ವ ಪ್ರಶಸ್ತಿ'ಗೆ ಸುಕ್ರಿ ಬೊಮ್ಮಗೌಡ ಆಯ್ಕೆ; ನ.7ರಂದು ಪ್ರದಾನ

ಮಂಗಳೂರು: ನಗರದ ಮೂಲತ್ವ ಫೌಂಡೇಷನ್ ಚಾರಿಟೇಬಲ್ ಟ್ರಸ್ಟ್ ನಿಂದ ಕೊಡ ಮಾಡುವ 'ಮೂಲತ್ವ ವಿಶ್ವ ಪ್ರಶಸ್ತಿ'ಗೆ ಈ ಬಾರಿ ಹಾಲಕ್ಕಿ ಸಮುದಾಯದ ಹೋರಾಟಗಾರ್ತಿ , ಜಾನಪದ ಸಂಗೀತ ಸಾಧಕಿ, ಪದ್ಮಶ್ರೀ ಪುರಸ್ಕೃತೆ

ಸುಕ್ರಿ ಬೊಮ್ಮಗೌಡ ಆಯ್ಕೆಯಾಗಿದ್ದಾರೆ.

ಸುಕ್ರಿ ಬೊಮ್ಮಗೌಡ ಅವರಿಗೆ ಆರೋಗ್ಯದ ಸಮಸ್ಯೆ ಇರುವುದರಿಂದ ಅವರ ಮನೆಯಲ್ಲಿಯೇ ನಡೆಯುವ ಸರಳ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನಿಸಲಾಗುತ್ತದೆ. ನ.7ರಂದು ಸಂಜೆ ಅಂಕೋಲಾ ತಾಲೂಕಿನ ಬಡಗೇರಿ, ಅಲಗೇರಿಯ ಸುಕ್ರಿಯವರ ಮನೆಯಲ್ಲಿ ಮೂಲತ್ವ ವಿಶ್ವ ಪ್ರಶಸ್ತಿಯನ್ನು ಅವರಿಗೆ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನವರು‌ ಪ್ರದಾನಿಸುತ್ತಾರೆ.

ಪ್ರಶಸ್ತಿಯನ್ನು ಫಲಕದೊಂದಿಗೆ 50,001 ನಗದು ಸಹಿತ ನೀಡಲಾಗುತ್ತದೆ. ಇದುವರೆಗೆ ಐದು ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದು, ಸುಕ್ರಿ ಬೊಮ್ಮಗೌಡ ಅವರು ಮೂಲತ್ವ ವಿಶ್ವ ಪ್ರಶಸ್ತಿಗೆ ಆರನೇಯವರಾಗಿ ಆಯ್ಕೆಯಾಗಿದ್ದಾರೆ.

Edited By : Manjunath H D
Kshetra Samachara

Kshetra Samachara

04/11/2021 07:54 pm

Cinque Terre

6.1 K

Cinque Terre

0

ಸಂಬಂಧಿತ ಸುದ್ದಿ