ಕಟೀಲು:ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಯ ಸಚಿವ ಭಗವಂತ ಖೂಬಾ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಶ್ರೀ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಚಿವರಿಗೆ ಶ್ರೀ ದೇವರ ಪ್ರಸಾದ ಹಾಗೂ ಶೇಷವಸ್ತ್ರ ನೀಡಿದರು.
ಈ ಸಂದರ್ಭ ಕಟೀಲು ಕ್ಷೇತ್ರದ ಆರ್ಚಕ ಹರಿನಾರಾಯಣ ಆಸ್ರಣ್ಣ ಕಟೀಲು ದೇವಸ್ಥಾನದ ಅಭಿವೃದ್ಧಿ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು ಹಾಗೂ ಅಭಿವೃದ್ಧಿಗೆ ಸರಕಾರದ ಅನುದಾನದ ಬಗ್ಗೆ ವಿನಂತಿಸಿದರು. ಬಳಿಕ ಸಚಿವರು ದೇವಳದ ಉಪಹಾರ ಸ್ವೀಕರಿಸಿ ದೇವಳದ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಮಂಡಲಾಧ್ಯಕ್ಷ ಸುನಿಲ್ ಆಳ್ವ ಬಿಜೆಪಿ ನಾಯಕರಾದ ಕಸ್ತೂರಿ ಪಂಜ ,ಈಶ್ವರ ಕಟೀಲು ಅಭಿಲಾಶ್ ಶೆಟ್ಟಿ ಕಟೀಲು, ಆದರ್ಶ ಶೆಟ್ಟಿ ಎಕ್ಕಾರು, ದೇವಳದ ಮ್ಯಾನೇಜರ್ ತಾರಾನಾಥ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
29/10/2021 10:56 am