ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕರಾವಳಿಯಲ್ಲಿ ನಿರುದ್ಯೋಗಿಗಳನ್ನು ಸೃಷ್ಟಿಸಿದ್ದೇ ನಳಿನ್ ಕುಮಾರ್ ಸಾಧನೆ; ಮುನೀರ್ ಕಾಟಿಪಳ್ಳ ಆರೋಪ

ಮಂಗಳೂರು: ಕರಾವಳಿಯಲ್ಲಿ ಸೃಷ್ಟಿಯಾಗಿರುವ ನಿರುದ್ಯೋಗಕ್ಕೆ ಬಿಜೆಪಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಜಿಲ್ಲೆಯಲ್ಲಿ ನಿರುದ್ಯೋಗಿಗಳನ್ನು ಸೃಷ್ಟಿಸಿದ್ದಿರುವುದೇ ಸಂಸದ ನಳಿನ್ ಕುಮಾರ್ ಕಟೀಲುರವರ ಸಾಧನೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತ ಪಡಿಸಿದರು.

ಮಂಗಳೂರು ಸೆಝ್ ಗೆ ಭೂಮಿ ಕಳೆದುಕೊಂಡಿರುವ ಸಂತ್ರಸ್ತರ ಕುಟುಂಬದ ಸದಸ್ಯರನ್ನು ಒಪ್ಪಂದದಂತೆ ಕೆಲಸಕ್ಕೆ ನೇಮಕ ಮಾಡಬೇಕು, ಜೆಬಿಎಫ್ ಕಂಪೆನಿ ಉತ್ಪಾದನೆ ಆರಂಭಿಸಬೇಕು, ಸೆಝ್ ನಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ಮೀಸಲಿಡಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಡಿವೈಎಫ್ಐ ಮಂಗಳೂರು ನಗರ ಸಮಿತಿಯು ಜೋಕಟ್ಟೆಯಲ್ಲಿರುವ ಸೆಝ್ ಪ್ರಧಾನ ದ್ವಾರದ ಮುಂಭಾಗ ಪ್ರತಿಭಟನಾ ಧರಣಿ ನಡೆಸಿತು.

ಧರಣಿಯನ್ನು ಉದ್ಘಾಟಿಸಿ ಮಾತಾಡಿದ ಅವರು, ಅಭಿವೃದ್ದಿಯ ಮಂತ್ರ ಜಪಿಸುತ್ತಿರುವ ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಬಿಜೆಪಿ ಶಾಸಕರು, ಇಲ್ಲಿನ ಕಂಪೆನಿಗಳು ಸ್ಥಳೀಯರಿಗೆ ಉದ್ಯೋಗ ನೀಡದೆ ಹೊರಗಟ್ಟಿದಾಗ ಮೌನಕ್ಕೆ ಶರಣಾಗುತ್ತಾರೆ‌.‌ ಎಂಆರ್ ಪಿಎಲ್ ನೇಮಕಾತಿಯಲ್ಲಿ ಅನ್ಯಾಯ ನಡೆದ ಸಂದರ್ಭ ನೇಮಕಾತಿಗೆ ತಡೆ ಹೇರುವ ಕಪಟ ನಾಟಕ ಆಡಿದ ಸಂಸದರು ಹಾಗೂ ಶಾಸಕರುಗಳು ಸ್ಥಳೀಯರಿಗೆ ಉದ್ಯೋಗ ಮೀಸಲಾತಿಗೆ ಕಾಯ್ದೆ ತರುವ ಮಾತುಗಳನ್ನು ಆಡಿದ್ದರು. ಆದರೆ ಈಗ ಅದಾನಿ ವಿಮಾನ ನಿಲ್ದಾಣ, ಸೆಝ್ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗದ ಅವಕಾಶ ನೀಡದೆ ಹೊರದಬ್ಬುತ್ತಿದೆ. ಅಲ್ಲದೆ ಯುವಜನರನ್ನು ಧರ್ಮದ ಆಧಾರದಲ್ಲಿ ಪರಸ್ಪರ ಎತ್ತಿಕಟ್ಟುತ್ತಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು‌.

Edited By : Nagesh Gaonkar
Kshetra Samachara

Kshetra Samachara

27/10/2021 10:41 pm

Cinque Terre

18.26 K

Cinque Terre

1

ಸಂಬಂಧಿತ ಸುದ್ದಿ