ಮಂಗಳೂರು:ಮಂಗಳೂರು ನಗರದ ಕೆಲವೆಡೆ ಏಕಮುಖ ರಸ್ತೆ ನಿರ್ಮಿಸಲಾಗಿದೆ. ಅದರಲ್ಲೂ ನಗರದ ಎಬಿಶೆಟ್ಟಿ ಏಕಮುಖ ರಸ್ತೆ ಸಂಚಾರ ವ್ಯವಸ್ಥೆಯನ್ನು ವಿರೋಧಿಸಿ ಸರ್ಕಲ್ ಬಳಿ ಮಂಗಳೂರು ದಕ್ಷಿಣ ವಿಧಾನ ಸಭಾ ಜೆಡಿಎಸ್ ಇಂದು ಪ್ರತಿಭಟನೆ ನಡೆಸಿತು.
ಏಕಮುಖ ರಸ್ತೆಯಿಂದ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಕೂಡಲೇ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.ಈ ವೇಳೆ ಜೆಡಿಎಸ್ ಜಿಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು..
Kshetra Samachara
27/10/2021 12:54 pm