ಕುಂದಾಪುರ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಕುಂದಾಪುರದಲ್ಲಿ ಯುವ ಬ್ರಿಗೇಡ್ ನಿಂದ ಪಂಜಿನ ಮೆರವಣಿಗೆ ನಡೆಯಿತು.
ಕುಂದಾಪುರ ಯುವ ಬ್ರಿಗೇಡ್ ತಂಡದಿಂದ ಶಾಸ್ತ್ರಿ ಸರ್ಕಲ್ ನಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ದಸರಾ ಹಬ್ಬದ ವೇಳೆ ಬಾಂಗ್ಲಾದಲ್ಲಿ ಉಂಟಾದ ಕೋಮುಗಲಭೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಗಲಭೆಕೋರರ ವಿರುದ್ಧ ಘೋಷಣೆಗಳನ್ನು ಕೂಗಿದರು.ಪಂಜಿನ ಮೆರವಣಿಗೆ ಯಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
Kshetra Samachara
23/10/2021 09:33 pm