ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಹಾಲಿನ ಸಂಗ್ರಹಣಾ ದರದಲ್ಲಿ ಏಕರೂಪತೆ ತಂದರೆ ಸಮಸ್ಯೆ ಪರಿಹಾರ ಆಗಲ್ಲ"

ಉಡುಪಿ: ರಾಜ್ಯದಲ್ಲಿ ಹಾಲಿನ ಸಂಗ್ರಹಣಾ ದರದಲ್ಲಿ ಏಕರೂಪತೆ ತರಬೇಕು ಎನ್ನುವ ಪ್ರಸ್ತಾಪಕ್ಕೆ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರವಿರಾಜ್ ಹೆಗ್ಡೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ನಡೆದ 'ರಾಸುಗಳ ಕೃತಕ ಗರ್ಭಾಧಾರಣೆ ಪುನರ್ ಮನನ' ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಒಟ್ಟು14 ಹಾಲು ಉತ್ಪಾದಕರ ಒಕ್ಕೂಟವಿದ್ದು, ಹಾಲಿನ ಸಂಗ್ರಹಣಾ ದರವನ್ನು ಕೆಲವೊಂದು ಒಕ್ಕೂಟಗಳಲ್ಲಿ 22ರಿಂದ 28 ರೂ. ನಷ್ಟು ನೀಡುತ್ತಿದೆ. ದ.ಕ. ಹಾಲು ಉತ್ಪಾದಕರ ಒಕ್ಕೂಟ ರೈತರಿಗೆ 28 ರೂ. ಹಾಲಿನ ಸಂಗ್ರಹಣಾ ದರವನ್ನು ನೀಡುತ್ತಿದೆ.

ಹಾಲಿನ ಸಂಗ್ರಹಣಾ ದರದಲ್ಲಿ ಏಕರೂಪತೆ ತಂದರೆ ಸಮಸ್ಯೆ ಪರಿಹಾರ ಆಗಲ್ಲ. ಹೆಚ್ಚುವರಿ ಬಂದಂತಹ ಹಾಲನ್ನು ವಿತರಿಸುವ ಮಾರುಕಟ್ಟೆ ವ್ಯವಸ್ಥಿತವಾಗಿ ಆಗಬೇಕು. ಈ ಮೂಲಕ ರೈತರಿಗೆ ಅತಿ ಹೆಚ್ಚು ದರ ನೀಡುವ ಕಾರ್ಯ ಆಗಬೇಕಿದೆ.

ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಈ ಪ್ರಸ್ತಾವನೆಯನ್ನು ಬಹಿರಂಗವಾಗಿ ಖಂಡಿಸುತ್ತದೆ ಎಂದರು.

Edited By : Manjunath H D
Kshetra Samachara

Kshetra Samachara

23/10/2021 01:21 pm

Cinque Terre

11.81 K

Cinque Terre

1

ಸಂಬಂಧಿತ ಸುದ್ದಿ