ಮಂಗಳೂರು: ಮಾಜಿ ಎಂಎಲ್ ಸಿ ಒಬ್ಬರು ಭಜರಂಗದಳದ ಬಗ್ಗೆ ಮಾತನಾಡಿದ್ದಾರೆ. ಅವರು ಈಗಾಗಲೇ ಸರಿದು ಹೋಗಿದ್ದಾರೆ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಸ್ವಾಮೀಜಿ, ಅವರದ್ದು 'ಐ' ಹೋಗಿ 'ವನ್' ಆಗಿದ್ದಾರೆ. ಇನ್ನು ವನ್ ಕೂಡ ಹೋಗಿ ಯಾರೂ ಅವರನ್ನು ನೋಡದಂತಹ ಪರಿಸ್ಥಿತಿ ಬರಬಹುದು ಎಂದರು. ಈ ಬಗ್ಗೆ ಅವರು ಗಮನಿಸಲಿ. ಅವ್ರು ಗುರುತಿಸುವ ಪಕ್ಷ ಮುಳುಗುತ್ತಿದೆ. ಅದರ ಜೊತೆಗೆ ಅವರು ಕೂಡ ಮುಳುಗುತ್ತಿದ್ದಾರೆ. ಅವರು ಯಾರನ್ನು ಮದುವೆ ಆಗಿದ್ದಾರೆ, ಯಾರ ಜೊತೆಗೆ ಸಂಸಾರ ಮಾಡುತ್ತಿದ್ದಾರೆ ಎನ್ನುವುದನ್ನು ಅವರು ಗಮನಿಸಲಿ.
ಕೇಸರಿ ಬಗ್ಗೆ ಮಾತಾಡಿದವರೇ ಕೇಸರಿ ಹೆಣ್ಣನ್ನು ಮದುವೆ ಆಗಿದ್ದಾರೆ. ಮತಾಂತರ ಆಗಿರುವುದು ಅಲ್ಲೇ ಎಂದರು. ಹೀಗಾಗಿ ಅವರು ಮುಂದೆ ಮಾತಾಡುವಾಗ ಎಚ್ಚರಿಕೆಯಿಂದ ಇರಲಿ. ಕೇಸರಿಯನ್ನು ಕೆಣಕುವುದು ಬೇಡ. ಇನ್ನು ಅವರು, ಕೇಸರಿ ಹಾಕಿದವರು ಬೇರೆ ಬೇರೆ ಪ್ರವೃತ್ತಿಗಳಲ್ಲಿ ಇದ್ದಾರೆ ಎಂದು ದೂರಿದ್ದಾರೆ. ಅವರು ಅದಕ್ಕೆ ದಾಖಲೆಗಳನ್ನು ಬಿಡುಗಡೆಗೊಳಿಸಲಿ ಎಂದು ಸವಾಲು ಹಾಕಿದರು.
Kshetra Samachara
21/10/2021 07:11 pm