ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಕೇಂದ್ರ ಸರಕಾರ ಮನಸ್ಸು ಮಾಡಿದರೆ 45 ರೂ.ಗೆ ಪೆಟ್ರೋಲ್ ನೀಡಬಹುದು; ವೀರಪ್ಪ ಮೊಯ್ಲಿ

ಕಾರ್ಕಳ: ಕೇಂದ್ರ ಸರಕಾರ ಮನಸ್ಸು ಮಾಡಿದರೆ 45 ರೂಪಾಯಿಗೆ ಪೆಟ್ರೋಲ್ ನೀಡಬಹುದು. ನಾವು ಅಧಿಕಾರದಲ್ಲಿ ಇದ್ದಿದ್ದರೆ ಲೀಟರ್ ಗೆ ಇಷ್ಟೊಂದು ದುಬಾರಿ ದರ ಇರುತ್ತಿರಲಿಲ್ಲ ಎಂದು 'ಕೈ' ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ, ಕಳೆದ ಆರೇಳು ವರ್ಷಗಳಲ್ಲಿ ಪೆಟ್ರೋಲ್' ಡೀಸೆಲ್ ಬೆಲೆ ವಿಪರೀತ ಹೆಚ್ಚುತ್ತಿದೆ. ನಾವಿರುವಾಗ 350 - 400 ಇದ್ದ ಸಿಲಿಂಡರ್ ಬೆಲೆ ಈಗ ಸಾವಿರ ಹತ್ತಿರ ಬಂದಿದೆ. ಅದೂ ಅಲ್ಲದೆ ಯುಪಿಎ ಸರಕಾರ ಇದ್ದಾಗ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ ಹೆಚ್ಚಿನ ದರ ಆಗ ಇತ್ತು. ಈಗ ತೈಲ ದರ ಕಡಿಮೆ ಇದ್ದರೂ ಕೇಂದ್ರ ಸರಕಾರ ಜನರಿಂದ ಕೋಟ್ಯಂತರ ತೆರಿಗೆ ಹಣ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದರು.

ಗಾಂಧಿ ನಡಿಗೆ ಕಾರ್ಯಕ್ರಮ: ಕಾಂಗ್ರೆಸ್ ಪಕ್ಷವನ್ನು ತಳ ಮಟ್ಟದಿಂದ ಗಟ್ಟಿಗೊಳಿಸಲು, ಬೂತ್ ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ ಬಲಪಡಿಸಲು 'ಗಾಂಧಿ ನಡಿಗೆ' ಕಾರ್ಯಕ್ರಮ ಆಯೋಜಿಸಲಾಗುವುದು. ನನ್ನ ಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ಅದು ಈಗಾಗಲೇ ನಡೆದಿದ್ದು, ನವೆಂಬರ್ ನಲ್ಲಿ ಎಲ್ಲ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದು ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

21/10/2021 05:15 pm

Cinque Terre

6.18 K

Cinque Terre

6

ಸಂಬಂಧಿತ ಸುದ್ದಿ