ಉಡುಪಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಡ್ರಗ್ ಪೆಡ್ಲರ್ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆ ವಿಚಾರವಾಗಿ
ಉಡುಪಿಯಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ಸಿಗರ ಆಕ್ರೋಶವನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಆರೋಪ ಬಂದಾಗ ನಿರಾಕರಣೆ ಮಾಡಲು ಅವಕಾಶವಿದೆ.
ಸಿದ್ದರಾಮಯ್ಯ ಆರೆಸ್ಸೆಸ್ಸನ್ನು ತಾಲಿಬಾನಿಗಳಿಗೆ ಹೋಲಿಸಿಲ್ಲವೇ? ರಾಷ್ಟ್ರಭಕ್ತ ಸಂಘಟನೆಯನ್ನು ಆ ರೀತಿ ಆರೋಪಿಸಿದ್ದು ಸರಿಯಾ?
ಅದರಿಂದ ನಮಗೂ ನೋವಾಗಿತ್ತು. ಆದರೆ, ಅವರ ಆರೋಪವನ್ನು ನಾವು ನಿರಾಕರಿಸಿದೆವು ಎಂದು ಹೇಳಿದ್ದಾರೆ.
ನೀವು ಆರ್ ಎಸ್ ಎಸ್ ನ್ನು ಪೂರ್ಣ ಸಮೀಕ್ಷೆ ಮಾಡಿ ಎಂದು ಕಾಂಗ್ರೆಸಿಗರಿಗೆ ಕರೆ ನೀಡಿದೆವು. ವಿಶ್ವನಾಯಕ- ಶ್ರೇಷ್ಠ ಪ್ರಧಾನಿಯನ್ನು ಸಿದ್ದರಾಮಯ್ಯ ಟೀಕಿಸಿದರು. ಮೋದಿ ಅವರನ್ನು ಏಕವಚನದಲ್ಲಿ ಕರೆದು ಅಪಮಾನ ಮಾಡಿದರು. ಅವರ ಹೇಳಿಕೆಯನ್ನು ನಾವು ಖಂಡಿಸಿದೆವು. ರಾಹುಲ್ ಗಾಂಧಿ ಬಗ್ಗೆ ಹೇಳಿದ ಮಾತಿಗೆ ಸಹಮತ ಇಲ್ಲವಾದರೆ ನಿರಾಕರಿಸಿ.
ವ್ಯರ್ಥ ಗದ್ದಲಗಳಿಂದ ಯಾವುದೇ ಪರಿಹಾರ ಆಗುವುದಿಲ್ಲ ಎಂದರು.
Kshetra Samachara
19/10/2021 07:27 pm