ಪುತ್ತೂರು: ಬಿಜೆಪಿ ಹಿರಿಯ ಧುರೀಣ, ಪುತ್ತೂರಿನ ಮಾಜಿ ಶಾಸಕ ರಾಮ್ ಭಟ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ರಾಮ್ ಭಟ್ ಅವರಿಗೆ 92 ವರ್ಷ ವಯಸ್ಸಾಗಿದ್ದು, ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ರಾಮ್ ಭಟ್ ದ.ಕ. ಬಿಜೆಪಿಯ ಭೀಷ್ಮ ಎಂದು ಗುರುತಿಸಿಕೊಂಡವರಾಗಿದ್ದು, ರಾಜ್ಯದಲ್ಲಿ ಇಬ್ಬರೇ ಬಿಜೆಪಿ ಶಾಸಕರಿದ್ದ ಕಾಲದಲ್ಲಿ ಪುತ್ತೂರಿನಿಂದ ಶಾಸಕರಾಗಿದ್ದ ರಾಮ್ ಭಟ್, ಯಡಿಯೂರಪ್ಪರೊಂದಿಗೆ ವಿಧಾನಸಭೆಯಲ್ಲಿದ್ದರು. 2008 ರಲ್ಲಿ ಬಿಜೆಪಿ ಜೊತೆ ಮುನಿಸಿಕೊಂಡಿದ್ದ ರಾಮ್ ಭಟ್ ಶಕುಂತಲಾ ಶೆಟ್ಟಿಯನ್ನು ಬಿಜೆಪಿ ವಿರುದ್ಧ ಬಂಡಾಯವಾಗಿ ನಿಲ್ಲಿಸುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದ್ದರು. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮತ್ತೆ ಬಿಜೆಪಿ ಬೆಂಬಲಿಸಿದ್ದ ರಾಮ್ ಭಟ್ ಗೆ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಖುದ್ದು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು.
Kshetra Samachara
18/10/2021 04:21 pm