ಮಂಗಳೂರು: ರಾಜಕೀಯ ದುರುದ್ದೇಶ ಇಟ್ಟುಕೊಂಡು ಬಿಜೆಪಿ ಪಕ್ಷ, 'ಕ್ರಿಶ್ಚಿಯನ್ ಸಮುದಾಯವನ್ನು ಮತಾಂತರ ಮಾಡುತ್ತಿದೆ ಎಂದು ಗೂಬೆ ಕೂರಿಸುತ್ತಿದೆ. ಈ ಮೂಲಕ ಅಲ್ಪಸಂಖ್ಯಾತ ಕ್ರಿಶ್ಚಿಯನ್ ರನ್ನು ಬಹುಸಂಖ್ಯಾತರ ವಿರುದ್ಧ ಎತ್ತಿ ಕಟ್ಟುವ ಹುನ್ನಾರ ನಡೆಸುತ್ತಿದೆ' ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಮಾಜಿ ಶಾಸಕರು, ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳ ಕ್ರಿಶ್ಚಿಯನ್ ಮಿಷನರಿಗಳು ಹಾಗೂ ಕ್ರಿಶ್ಚಿಯನ್ ಸಂಸ್ಥೆಗಳು ನಡೆಸುತ್ತಿರುವ ಕಾರ್ಯ ಚಟುವಟಿಕೆ ಬಗ್ಗೆ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ರಾಜ್ಯ ವಿಧಾನ ಮಂಡಲ ಸದನದ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿ ತನ್ನ ಇತ್ತೀಚಿನ ಸಭೆಯಲ್ಲಿ ಸೂಚನೆ ನೀಡಿದೆ.
ಅಲ್ಲದೆ, ರವಿವಾರ ಚರ್ಚ್ ಗಳಿಗೆ ಭೇಟಿ ನೀಡಬೇಕೆಂದು ಸಮಿತಿಯ ಸದಸ್ಯರಿಗೆ ಆದೇಶಿಸಿದೆ. ಸಮಿತಿ ತನ್ನ ಕಾರ್ಯವ್ಯಾಪ್ತಿ ಹಾಗೂ ಇತಿಮಿತಿ ಮೀರುತ್ತಿದೆ. ರವಿವಾರ ದಿನ ಎಲ್ಲರೂ ಚರ್ಚ್ ಗಳಿಗೆ ಬರಲಿ. ಎಲ್ಲರಿಗೂ ಬಾಗಿಲು ತೆರೆದಿವೆ ಎಂದರು.
ಬಿಜೆಪಿ ಈ ರೀತಿ ಹುನ್ನಾರ ನಡೆಸಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ಮಾಡುತ್ತಿದೆ. ಇದು ರಾಜಕೀಯ ದುರುದ್ದೇಶ ಪ್ರೇರಿತವಾಗಿದ್ದು, ಜನಸಾಮಾನ್ಯರು ಇದಕ್ಕೆ ಬಲಿ ಬೀಳಬಾರದು ಎಂದು ಜೆ.ಆರ್.ಲೋಬೊ ಹೇಳಿದರು.
Kshetra Samachara
16/10/2021 03:22 pm