ಉಡುಪಿ: ಯುವ ಕಾಂಗ್ರೆಸ್ ನ ವಕ್ತಾರರ ಆಯ್ಕೆಗಾಗಿ ರಾಷ್ಟ್ರೀಯ ಭಾಷಣ ಸ್ಪರ್ಧೆ "ಯಂಗ್ ಇಂಡಿಯಾ ಕೆ ಬೋಲ್” (ಯುವ ಭಾರತದ ಧ್ವನಿ) ಎಂಬ ವಿನೂತನ ಸ್ಪರ್ಧೆಯನ್ನು ರಾಷ್ಟ್ರಾದ್ಯಂತ ಏರ್ಪಡಿಸಲಾಗುತ್ತಿದೆ.
ಈ ಸ್ಪರ್ಧೆ 18ರಿಂದ 35 ವರ್ಷದವರಿಗೆ ಸೀಮಿತ. ಮೊದಲನೆ ಹಂತದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ಏರ್ಪಡಿಸಿ 5 ವಿಜೇತರನ್ನು ಜಿಲ್ಲಾ ವಕ್ತಾರರಾಗಿ ನೇಮಕ ಮಾಡಲಾಗುವುದು. ನಂತರ ರಾಜ್ಯಮಟ್ಟದ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಏರ್ಪಡಿಸಿ ರಾಜ್ಯದ ಪ್ರತಿ ಜಿಲ್ಲೆಯಿಂದ 5 ವಿಜೇತರನ್ನು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕೊಡಲಾಗುವುದು. ರಾಜ್ಯಮಟ್ಟದ ಸ್ಪರ್ಧೆಯ 10 ವಿಜೇತರನ್ನು ರಾಜ್ಯ ವಕ್ತಾರರಾಗಿ ನೇಮಿಸಿ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹುಟ್ಟುಹಬ್ಬವಾದ ನ. 14ರಂದು ರಾಷ್ಟ್ರಮಟ್ಟದ ಸ್ಪರ್ಧೆ ನವದೆಹಲಿಯಲ್ಲಿ ಏರ್ಪಡಿಸಲಾಗುವುದು. 5 ವಿಜೇತರನ್ನು ರಾಷ್ಟ್ರೀಯ ವಕ್ತಾರರಾಗಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ನೇಮಕ ಮಾಡಲಿದ್ದಾರೆ ಎಂದರು. ಉಪಾಧ್ಯಕ್ಷೆ ಸುರಯ್ಯಾ ಅಂಜುಮ್ ಮತ್ತಿತರರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಭಾಗವಹಿಸುವವರು ಗೂಗಲ್ ಲಿಂಕ್ https://forms.gle/JykxwXusa8n7y9Vg7 ಫಾರ್ಮ್ ತುಂಬಿ ಕಳುಹಿಸುವುದು ಕಡ್ಡಾಯವಾಗಿದೆ.
Kshetra Samachara
12/10/2021 01:44 pm