ಉಡುಪಿ: ಗೃಹಸಚಿವ ಆರಗ ಜ್ಞಾನೆಂದ್ರ ಉಡುಪಿಯಲ್ಲಿ ಪೊಲೀಸ್ ವಸತಿ ಸಮುಚ್ಛಯವನ್ನು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಕೆಲ ಪೊಲೀಸ್ ಕಾನ್ಸ್ಟೇಬಲ್ ಗಳು ಮತ್ತು ಅಧಿಕಾರಿಗಳ ಕುಟುಂಬದವರು ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ನಮಗೂ ಹೊಸ ಮನೆಗಳನ್ನು ಕಟ್ಟಿಸಿ ಕೊಡಿ ಎಂದು ಒತ್ತಾಯಿಸಿದರು.
ನಮ್ಮ ಮನೆಗಳು ಸೋರುತ್ತಿವೆ, ಫ್ಯಾನು ತಿರುಗಲ್ಲ, ವಿದ್ಯುದ್ದೀಪಗಳು ಉರಿಯಲ್ಲ . ಗೋಡೆಗಳು ಬಿರುಕು ಬಿಟ್ಟಿವೆ. ನಮಗೂ ಅಪಾರ್ಟ್ಮೆಂಟ್ ಕಟ್ಟಿಸಿಕೊಡಿ, ಇಲ್ಲವಾದಲ್ಲಿ ನಮ್ಮ ಕಟ್ಟಡದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ ಎಂದು ಮನವಿ ಮಾಡಿದರು. ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳನ್ನ ಕೂಡಲೇ ಕರೆಸಿದ ಸಚಿವ ಆರಗ ಜ್ಞಾನೇಂದ್ರ ಸಮಸ್ಯೆಗಳನ್ನು ಬೇಗ ಪರಿಹಾರ ಮಾಡಿಕೊಡಿ ಎಂದು ತಾಕೀತು ಮಾಡಿದರು.
Kshetra Samachara
09/10/2021 06:24 pm