ಮುಲ್ಕಿ:ಕಿನ್ನಿಗೋಳಿ ಪಟ್ಟಣ ವ್ಯಾಪ್ತಿಯ ಕಟೀಲು ಮಲ್ಲಿಗೆಯಂಗಡಿ ಸಮೀಪ ಭ್ರಾಮರಿ ಸಭಾಭವನ, ಗ್ರಾಮ ಕರಣಿಕರ ಕಚೇರಿ ಹಾಗೂ,ಎಂ. ಆರ್. ಪಿ.ಎಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಮಂಗಳೂರು ಸಹಯೋಗದೊಂದಿಗೆ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸರಕಾರದಿಂದ ಗ್ರಾಮೀಣ ಪ್ರದೇಶಗಳಿಗೆ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದ್ದು ಅಭಿವೃದ್ಧಿ ಕಾರ್ಯಕ್ರಮಗಳೇ ನಮ್ಮ ಧ್ಯೇಯ ಎಂದರು.
ಮುಖ್ಯ ಅತಿಥಿಗಳಾಗಿ ಸಂಸದರಾದ ನಳಿನ್ ಕುಮಾರ್ ಕಟೀಲ್ ,ಕಟೀಲು ದೇವಸ್ಥಾನದ ಅರ್ಚಕ ಹರಿ ಆಸ್ರಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಾಪ ಭೋವಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ.ಕಾರಗಿ,.ಶ್ರೀ ಕ್ರಷ್ಣ ಹೆಗ್ಡೆ , ಗ್ರೂಪ್ ಜನರಲ್ ಮೆನೇಜರ್,ಎಂ.ಆರ್. ಪಿ .ಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ದೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ಕಮಲಮ್ಮ, ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಕೇಂದ್ರ ಮೇಲ್ವಿಚಾರಕಿ ಇಂದಿರಾ ಆರ್ ಉಪಸ್ಥಿತರಿದ್ದರು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯೀಶ್ ಚೌಟ ಸ್ವಾಗತಿಸಿ, ರೇವತಿ ಪುರುಷೋತ್ತಮ ನಿರೂಪಿಸಿ ಶ್ರೀಮತಿ ಶೈಲಾ ಕೆ.ಕಾರಗಿ ವಂದಿಸಿದರು.
Kshetra Samachara
09/10/2021 03:35 pm