ಉಡುಪಿ: ರಾಜ್ಯದ ಉಷ್ಣವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಸ್ಥಗಿತ ಆದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ
ಇಂಧನ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಳೆಗಾಲದಲ್ಲಿ ದೇಶಾದ್ಯಂತ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಸಮಸ್ಯೆ ಉಂಟಾಗಿದ್ದು,ಈ ಹಿನ್ನೆಲೆಯಲ್ಲಿ ಕಲ್ಲಿದ್ದಲಿನ ಅಭಾವ ತಲೆದೋರಿದೆ. ಬೆಳಿಗ್ಗೆ ಕೇಂದ್ರ ಸಚಿವರ ಜೊತೆ ಈ ಕುರಿತು ಮಾತುಕತೆ ನಡೆಸಿದ್ದೇನೆ.
ಒರಿಸ್ಸಾ ಮತ್ತು ಮಹಾರಾಷ್ಟ್ರ ದಿಂದ ರಾಜ್ಯಕ್ಜೆ ಬರುವ ಕಲ್ಲಿದ್ದಲು ಪೂರೈಕೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ನಾಲ್ಕೈದು ದಿನದಲ್ಲಿ ಎಲ್ಲ ಸರಿಯಾಗುತ್ತದೆ ಎಂಬ ಭರವಸೆ ಕೇಂದ್ರ ಸಚಿವರಿಂದ ಸಿಕ್ಕಿದೆ ಎಂದು ಹೇಳಿದ ಸಚಿವರು,
ಹಿರಿಯ ಅಧಿಕಾರಿಗಳ ಜೊತೆಗೂ ನಿರಂತರ ಚರ್ಚೆ ನಡೆಸುತ್ತಿದ್ದೇವೆ. ಆತಂಕಕ್ಕೊಳಗಾಗುವ ಪರಿಸ್ಥಿತಿ ಕರ್ನಾಟಕದಲ್ಲಿಲ್ಲ.
ಬಳ್ಳಾರಿ ,ರಾಯಚೂರಿನಿಂದ ಸಣ್ಣ ಪ್ರಮಾಣದ ಕಲ್ಲಿದ್ದಲು ಪೂರೈಕೆ ಆಗುತ್ತಿದೆ.ರಾತ್ರಿ ಕೇಂದ್ರ ಸಚಿವರ ಜೊತೆ ಇನ್ನೊಮ್ಮೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
Kshetra Samachara
08/10/2021 04:00 pm