ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಪೌರಕಾರ್ಮಿಕರು ಊರಿನ ರಾಯಭಾರಿಗಳು": ಉಮಾನಾಥ ಕೋಟ್ಯಾನ್

ಮುಲ್ಕಿ: ಭಾರತೀಯ ಜನತಾ ಪಾರ್ಟಿ ಮುಲ್ಕಿ ಮಹಾಶಕ್ತಿ ಕೇಂದ್ರ ವತಿಯಿಂದ "ಸೇವೆ ಮತ್ತು ಸಮರ್ಪಣೆ ಅಭಿಯಾನ"ನಿಮಿತ್ತ

ಸಮಾಜದ ವಿವಿಧ ಶ್ರಮಿಕ ವರ್ಗಗಳ ಗುರುತಿಸುವಿಕೆ ಕೊರೊನಾ ಸಂಕಷ್ಟದ ಸಮಯದಲ್ಲಿ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ನಗರವನ್ನು ಸ್ವಚ್ಛವಾಗಿಡುವುದಲ್ಲದೆ ಕೊರೊನಾ ಸೋಂಕಿತ ವ್ಯಕ್ತಿಗಳಿಗೆ ಧೈರ್ಯ ತುಂಬಿದ ಮುಲ್ಕಿ ನಗರ ಪಂಚಾಯತ್ ನ ಪೌರಕಾರ್ಮಿಕರಿಗೆ ಆಹಾರಧಾನ್ಯದ ವಿತರಣೆ ಹಾಗೂ ಗೌರವಿಸುವಿಕೆ ಕಾರ್ಯಕ್ರಮ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಪೌರಕಾರ್ಮಿಕರು ಊರಿನ ರಾಯಬಾರಿ ಗಳಾಗಿದ್ದು ಹಗಲಿರುಳೆನ್ನದೆ ಜೀವವನ್ನು ಪಣಕ್ಕಿಟ್ಟು ನಗರವನ್ನು ಸ್ವಚ್ಛವಾಗಿರಿಸಲು ಸಹಕರಿಸುತ್ತಿರುವ ಸಾಧಕರು ಎಂದರು.ಈ ಸಂದರ್ಭ ಮಂಡಲಾಧ್ಯಕ್ಷ ಸುನಿಲ್ ಆಳ್ವ, ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ರಮಾನಾಥ ಪೈ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು

Edited By : Manjunath H D
Kshetra Samachara

Kshetra Samachara

06/10/2021 06:10 pm

Cinque Terre

14.57 K

Cinque Terre

1

ಸಂಬಂಧಿತ ಸುದ್ದಿ