ಮಂಗಳೂರು: ಮಂಗಳೂರು ಹೊರವಲಯದ ಗುರುಪುರ ಚಿಲಿಂಬಿ ಗುಡ್ಡೆ ಎಂಬಲ್ಲಿ ಡ್ರಗ್ಸ್ ಸೇವಿಸಿದ್ದ ಇಬ್ಬರು ಯುವಕ-ಯುವತಿಯರನ್ನು ಹಿಂದೂ ಸಂಘಟನೆಯ ಬಜರಂಗದಳದವರು ಯಾವುದೇ ಕಾನೂನನ್ನು ಕೈಗೆತ್ತಿಕೊಳ್ಳದೆ ಪೊಲೀಸರಿಗೊಪ್ಪಿಸಿದ ಮಾಜೀ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಭಜರಂಗದಳದವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಮಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಕಾಲೇಜು ಯುವಕ-ಯುವತಿಯರ ಜೀವನವನ್ನು ಹಾಳು ಮಾಡುತ್ತಿದ್ದು ಈ ಬಗ್ಗೆ ಯುವಕ-ಯುವತಿಯರು ಹಾಗೂ ಮನೆಯವರು ಜಾಗೃತರಾಗಬೇಕಾಗಿದೆ.
ಪ್ರಕರಣದಲ್ಲಿ ಸಿಕ್ಕಿಬಿದ್ದ ಅಪ್ರಾಪ್ತ ಯುವತಿಯರಿಗೆ ಕೌನ್ಸಿಲಿಂಗ್ ಅಗತ್ಯವಿದ್ದು ತಾನು ನಡೆಸುತ್ತಿರುವ ಕುಳಾಯಿ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮೂಲಕ ಯಾವುದೇ ಸಹಾಯ ಹಸ್ತಕ್ಕೆ ಸಿದ್ಧ ಎಂದಿದ್ದಾರೆ.
ಪ್ರಥಮ ಬಾರಿಗೆ ಹಿಂದೂ ಸಂಘಟನೆಗಳನ್ನು ಶ್ಲಾಘಿಸಿರುವ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
Kshetra Samachara
05/10/2021 10:28 am