ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅ.4ರಂದು "ಅಂತ್ಯೋದಯ" ಮಾಹಿತಿ ಕಾರ್ಯಗಾರ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು: ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾಯಿತ ಸದಸ್ಯರಿಗೆ ಇಲಾಖೆಗೆ ಯೋಜನೆಗಳ ಬಗ್ಗೆ ಒಂದು ದಿನದ "ಅಂತ್ಯೋದಯ" ಮಾಹಿತಿ ಕಾರ್ಯಗಾರ ಬಂಟ್ವಾಳದ ಬಂಟರ ಭವನ ಸಭಾಂಗಣದಲ್ಲಿ ಅ.4ರಂದು ನಡೆಯಲಿದೆ.

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಕಾರ್ಯಗಾರಕ್ಕೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಸಚಿವ ಎ ನಾರಾಯಣ ಸ್ವಾಮಿ ಚಾಲನೆ ನೀಡಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಶುಭ ಹಾರೈಸಲಿದ್ದರೆ ಎಂದು ಹೇಳಿದರು.

"ಅಂತ್ಯೋದಯ" ಕಾರ್ಯಾಗಾರವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆಯೋಜಿಸುವ ಯೋಜನೆ ಹಾಕಿದ್ದು ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಈ ಕಾರ್ಯಾಗಾರದಲ್ಲಿ ನಮ್ಮ ಇಲಾಖೆಯ ಕಾರ್ಯ, ಇಲಾಖೆಯ ಯೋಜನೆ, ಆನ್ ಲೈನ್ ಅರ್ಜಿ ಮತ್ತು ಇತರ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಸಂವಾದ ನಡೆಯಲಿದೆ.

ಗಾಂಧಿ ಜಯಂತಿ ಪ್ರಯುಕ್ತ ಅ.2ರಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವತಿಯಿಂದ ಸ್ವಚ್ಚತಾ ಆಂದೋಲನದಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 30 ಜಿಲ್ಲೆಗಳ ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಏಕಕಾಲದಲ್ಲಿ ಬಹುದೊಡ್ಡ ಸ್ವಚ್ಚತಾ ಆಂದೋಲನ ನಡೆಯಲಿದೆ. ತಾನು ಕೂಡಾ ಮಂಗಳೂರಿನ ಕದ್ರಿಯಲ್ಲಿರುವ ವಸತಿ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ಅಂದು ಇಡೀ ರಾಜ್ಯದಲ್ಲಿ ಬೆಳಗ್ಗೆ 8 ರಿಂದ 12 ರವರೆಗೆ ಸ್ವಚ್ಚತಾ ಕಾರ್ಯಕ್ರಮ ನಡೆಯಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Edited By : Manjunath H D
Kshetra Samachara

Kshetra Samachara

01/10/2021 02:39 pm

Cinque Terre

8.89 K

Cinque Terre

0

ಸಂಬಂಧಿತ ಸುದ್ದಿ