ಮಂಗಳೂರು: ಕಾಂಗ್ರೆಸ್ ನಿಂದಾಗಿ ಸಿಟಿ ರವಿ ಸಹಿತ ಬಿಜೆಪಿಯವರು ರಾಜ್ಯಭಾರ ಮಾಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ದೇಗುಲ ಧ್ವಂಸ ಮಾಡಿದ್ದು ತಾಲಿಬಾನ್ ಕೃತ್ಯ, ಇದು ಸಂವಿಧಾನ ವಿರೋಧಿ ಅಂದರು. ದೇವರ ಹೆಸರಿನಲ್ಲಿ ರಾಜಕೀಯ ಮಾಡಿ ಆಡಳಿತಕ್ಕೇರಿದ್ದು ಬಿಜೆಪಿ. ಕಾಂಗ್ರೆಸ್ ಆಡಳಿತದಲ್ಲಿ ಇಂತಹ ಘಟನೆಗಳು ನಡೆದಿಲ್ಲ. ಸಾವಿನ ಮನೆಯಲ್ಲಿ ಬಿಜೆಪಿಯವರು ರಾಜಕೀಯ ಮಾಡಿದವರು. ಕೆಲ ಕೊಲೆ ಘಟನೆಗಳಲ್ಲಿ, ದೇಗುಲಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಬಿಜೆಪಿಯ ಅಂಗಸಂಸ್ಥೆಯ ಸಂಘಟನೆಯವರೇ ಜೈಲು ಸೇರಿದ್ದಾರೆ ಅಂದರು. ಇದೀಗ ರಾಜ್ಯದಲ್ಲಿ ತಾಲಿಬಾನ್ ಆಡಳಿತ, ಸಂಸ್ಕೃತಿ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯನವರು ಕೂಡಾ ಈ ಬಗ್ಗೆ ಮಾತಾಡಿದ್ದಾರೆ.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಿಗೆ ಬೆಲೆ ಕೊಡುತ್ತಿಲ್ಲ ಎಂದು ಸ್ವತಃ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರು ರಾಜೀನಾಮೆ ನೀಡುವಾಗ ಹೇಳಿಕೆ ನೀಡಿದ್ದಾರೆ ಎಂದರು. ಸೆಕ್ಷನ್ ಹಾಕಿದರೂ ಸಾವಿನ ಮೆರವಣಿಗೆ ನಡೆಸಿ ಕೇಕೆ ಹಾಕಿದ ಬಿಜೆಪಿಗೇ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ದುಷ್ಕೃತ್ಯಗಳನ್ನು ಮಾಡಿ ರಾಜಕೀಯ ನಡೆಸುವವ ಬಿಜೆಪಿ ಆಡಳಿತದಲ್ಲಿ ತಾಲಿಬಾನ್ ಸಂಸ್ಕೃತಿ ಇದೆ. ಮಂಗಳೂರಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿ, ಪಬ್ ದಾಳಿಗಳೆಲ್ಲಾ ತಾಲಿಬಾನ್ ಸಂಸ್ಕೃತಿ ಎಂದರು. ಒಟ್ಟಾರೆ ಭಯೋತ್ಪಾದನಾ, ತಾಲಿಬಾನ್ ಸಂಸ್ಕೃತಿ ಬಿಜೆಪಿಯದ್ದು ಅಂದರು.
Kshetra Samachara
30/09/2021 06:29 pm