ಬಜಪೆ:ಸಮಾಜದ ಆಗುಹೋಗುಗಳಲ್ಲಿ ಪ್ರಮುಖ ಪಾತ್ರವಹಿಸುವ ರಿಕ್ಷಾ ಚಾಲಕರು ಸಾರ್ವಜನಿಕರನ್ನು ಸುರಕ್ಷಿತವಾಗಿ ಮನೆಸೇರಿಸುವ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದು ಅವರ ಕೆಲಸ ಅನನ್ಯ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ,ಭರತ್ ಶೆಟ್ಟಿ ಅವರು ಹೇಳಿದರು.ಅವರು ಇಂದು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಲ್ಲಿ ಎಡಪದವಿನಲ್ಲಿ ನಿರ್ಮಿಸಲಾದ ನೂತನ ರಿಕ್ಷಾ ಪಾರ್ಕ್ ನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಈ ವೇಳೆ ಪಾರ್ಕ್ ನ ಹಿರಿಯ ರಿಕ್ಷಾ ಚಾಲಕ ಹರೀಶ್ ಕೊಟ್ಟಾರಿಯವರನ್ನು ಶಾಸಕರು ಸನ್ಮಾನಿಸಿದರು.ಈ ಸಂದರ್ಭ ಎಡಪದವು ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ, ಉಪಾಧ್ಯಕ್ಷೆ ಪ್ರೇಮಾ, ಪಂಚಾಯತ್ ಸದಸ್ಯರುಗಳು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ ಜನಾರ್ಧನ ಗೌಡ, ಕೃಷ್ಣ ಅಮೀನ್, ರಾಮ ಭಜನಾ ಮಂದಿರದ ಅಧ್ಯಕ್ಷ ಮುರಳೀಧರ್ ಶೆಟ್ಟಿ, ಎಡಪದವು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಕುಮಾರ್ ಎಂ. ಶಕ್ತಿ ಕೇಂದ್ರದ ಪ್ರಮುಖ್ ರಾಮಚಂದ್ರ ಪಟ್ಲಚ್ಚಿಲ್, ಉದ್ಯಮಿ ಮಾಧವ ಶೆಣೈ, ಶ್ರೀಮತಿ ಶರತ್ ಜಿ. ಜಯಶೀಲಾ ನಾಯ್ಕ್, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಯಂತ್, ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಕುಶಾಲ್ ಕುಮಾರ್ ಸ್ವಾಗತಿಸಿ ನಿರೂಪಿಸಿದರು.
Kshetra Samachara
29/09/2021 07:16 pm