ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್ : ಬಿಜೆಪಿ ಸರಕಾರದ ಆಡಳಿತದಲ್ಲಿ ಹಿಂದೂ ದೇವರಿಗೇ ರಕ್ಷಣೆ ಇಲ್ಲ: ಶಕುಂತಲಾ ಶೆಟ್ಟಿ

ಸುರತ್ಕಲ್ : "ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು, ಮಠ ಮಂದಿರಗಳನ್ನು ರಕ್ಷಣೆ ಮಾಡುವುದಾಗಿ ಭರವಸೆ ಕೊಟ್ಟು ಹಿಂದೂಗಳ ಮತ ಪಡೆದಿದ್ದ ಬಿಜೆಪಿ ಪಕ್ಷ ಇಂದು ರಾಜ್ಯದೆಲ್ಲೆಡೆ ದೇವಸ್ಥಾನಗಳನ್ನು ನಾಶ ಮಾಡುತ್ತಿದೆ. ಬಿಜೆಪಿ ಸರಕಾರದ ಆಡಳಿತದಲ್ಲಿ ಹಿಂದೂ ದೇವರಿಗೇ ರಕ್ಷಣೆ ಇಲ್ಲದೆ ಬೀದಿಗೆ ಬಿದ್ದಿದ್ದಾರೆಂದರೆ ಇನ್ನು ಕೇಸರಿ ಶಾಲು, ನಾಮ ಹಾಕಿಕೊಂಡು ಓಡಾಡುವ ಹಿಂದೂ ಯುವಕರಿಗೆ ರಕ್ಷಣೆ ಇರಲು ಸಾಧ್ಯವೇ?" ಎಂದು ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಕಿಡಿಕಾರಿದರು.

ಅವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯದೆಲ್ಲೆಡೆ ಬಿಜೆಪಿ ಸರಕಾರ ಹಿಂದೂ ದೇವಾಲಯಗಳನ್ನು ಕೆಡಹುತ್ತಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು.

"ಮಾತೆತ್ತಿದರೆ ಅಚ್ಛೇ ದಿನ್ ಎನ್ನುವ ಬಿಜೆಪಿ ಕಾರ್ಯಕರ್ತರು ಇಂದು ತಮ್ಮ ಪಕ್ಷದ ನಾಯಕರು ಕಣ್ಮುಚ್ಚಿ ಹೆಣ್ಮಕ್ಕಳ ಜೊತೆ ಚೆಲ್ಲಾಟವಾಡುವುದನ್ನು, ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುವುದನ್ನು ನೋಡಿಯೂ ಕುರುಡಾಗಿದ್ದಾರೆ. ಇವರಿಗೆ ನಾಯಕರು ನಡೆಸುವ ಅತ್ಯಾಚಾರವೇ ಅಚ್ಛೇ ದಿನ್ ಆಗಿದೆ." ಎಂದರು.

ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದೀನ್ ಬಾವಾ ಅವರು, "600 ವರ್ಷಗಳ ಇತಿಹಾಸವಿರುವ ಹಿಂದುಳಿದ ವರ್ಗಕ್ಕೆ ಸೇರಿದ ನಂಜನಗೂಡು ದೇವಸ್ಥಾನವನ್ನು ಬಿಜೆಪಿ ಸರಕಾರ ಕೆಡವಿದ್ದು ಖೇದಕರ. ಹಿಂದೂ ಬಾಂಧವರ ಮತಗಳನ್ನು ಪಡೆದು ಈಗ ಹಿಂದೂ ದೇವಸ್ಥಾನಗಳ ಮೇಲೆ ರಾತೋರಾತ್ರಿ ದಾಳಿ ಮಾಡುತ್ತಿರುವುದು ನಾಚಿಕೆಗೇಡು. ಬಿಜೆಪಿ ನಾಯಕರು ಈ ಭಾಗದಲ್ಲಿದ್ದ ಪುರಾತನ ಗೋಶಾಲೆಯನ್ನು ಕೆಡವಿದ್ದಾರೆ. ಗೋವುಗಳು ಸೂರಿಲ್ಲದೆ ಹೊರಗಡೆ ಮಲಗುತ್ತಿದ್ದುದನ್ನು ನೋಡಿ ನಾನು ವೈಯಕ್ತಿಕ ನೆಲೆಯಲ್ಲಿ ಸ್ಪಂದಿಸಿದ್ದಕ್ಕೆ ಮೊಯಿದೀನ್ ಬಾವಾ ಗೋವುಗಳನ್ನು ಕಳ್ಳತನ ಮಾಡುತ್ತಾರೆ ಎಂದು ಅಪಪ್ರಚಾರ ಮಾಡಿದರು. ಯಾವೊಬ್ಬ ಬಿಜೆಪಿ ಜನಪ್ರತಿನಿಧಿ ಕೂಡಾ ಗೋಶಾಲೆ ನಿರ್ಮಾಣಕ್ಕೆ ಸ್ಪಂದಿಸಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರುತ್ತಲೇ ಇದೆ. ಬಡವರು ಮೂರು ಹೊತ್ತು ಊಟ ಮಾಡದೇ ಒಂದು ಹೊತ್ತು ಊಟ ಮಾಡುವ ಪರಿಸ್ಥಿತಿ ಎದುರಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಗೂ ಮುನ್ನ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಿಂದ ಸುರತ್ಕಲ್ ಜಂಕ್ಷನ್ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು. ಮೊಯಿದೀನ್ ಬಾವಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕೆಪಿಸಿಸಿ ಉಸ್ತುವಾರಿ ಮುರಳೀಧರ ಶೆಟ್ಟಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಶಾಂತ್, ಸುರತ್ಕಲ್ ಬ್ಲಾಕ್ ಅಧ್ಯಕ್ಷ ಸದಾಶಿವ ಶೆಟ್ಟಿ, ಉಪಾಧ್ಯಕ್ಷ. ಆನಂದ್ ಅಮೀನ್, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಪದ್ಮನಾಭ, ಬೋಂದೆಲ್ ಪಚ್ಚನಾಡಿ ಮಹಿಳಾ ಘಟಕ ಅಧ್ಯಕ್ಷೆ ಸಿಂಥಿಯಾ ಮಿರಂದ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಮುಹಮ್ಮದ್ ಶಮಿರ್ ಕಾಟಿಪಳ್ಳ, ಸುರತ್ಕಲ್ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಹಾರಿಸ್ ಬೈಕಂಪಾಡಿ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

29/09/2021 08:47 am

Cinque Terre

26.21 K

Cinque Terre

2

ಸಂಬಂಧಿತ ಸುದ್ದಿ