ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ನಾವುಂದ ಗ್ರಾಮಸಭೆ ..ಕಳಪೆ ಆಡಳಿತ ಅಧಿಕಾರಿಗಳ ವಿರುದ್ಧ ಗೌಜು ಗದ್ದಲ ????

ಬೈಂದೂರು: ಬೈಂದೂರು ತಾಲ್ಲೂಕಿನ ನಾವುಂದ ಗ್ರಾಮ ಪಂಚಾಯತ್ 2021-22ನೇ ಸಾಲಿನ ಗ್ರಾಮಸಭೆ ಗ್ರಾ. ಪಂ.

ಸಭಾಭವನದಲ್ಲಿ ನಡೆಯಿತು .ಶುಕ್ರವಾರ ನಡೆದ ಸಭೆಯ ನೋಡಲ್ ಅಧಿಕಾರಿಯಾಗಿ ಮಂಜುನಾಥ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಈ ಸಂದರ್ಭ ತುಂಬಿದ ಸಭೆಯಲ್ಲಿ ಹಲವು ವಿಚಾರಗಳಲ್ಲಿ ಗ್ರಾಮಸ್ಥರು ಗೌಜಿ ಗದ್ದಲಗಳು ಕೋಲಾಹಲಗಳು ನಡೆಯಿತು .

ಕಾಮಗಾರಿಗಳಲ್ಲಿನ "ಗೋಲ್ ಮಾಲ್ "ಗಳು ಸದ್ದು ಮಾಡಿದ್ದು ಸಮಗ್ರ ತನಿಖೆ ನಡೆಸಲು ನೋಡಲ್ ಅಧಿಕಾರಿಯಿಂದ ಆದೇಶ ಮಾಡಲು ಗ್ರಾಮಸ್ಥರು ಆಗ್ರಹಿಸಿದರು .ರಸ್ತೆ ಕಟ್ಟಿದ ಪ್ರಕರಣಗಳು ಇತ್ಯಾರ್ಥಕ್ಕೆ ಬಂದು ನಿಂತಿತು .

ಈ ಸಭೆಯಲ್ಲಿ ಜನರ ಊರ ಅಭಿಯಾನಕ್ಕೆ ಹಲವು ಪ್ರಶ್ನೆಗಳು ಸಾಕ್ಷಿಯಾಯಿತು .ಹಲವು ವಿಚಾರ ಗೊಂದಲದ ಗೂಡಾಗಿತ್ತು ಒಟ್ಟಿನಲ್ಲಿ ಜನರ ಪ್ರಶ್ನೆ ಮನೋಭಾವನೆ ಜಾಗ್ರತವಾಗಿದ್ದು ಈ ಸಭೆಯಲ್ಲಿ ಎದ್ದು ಕಾಣುತ್ತಿತ್ತು .ಎಲ್ಲಾ ಗ್ರಾಮಗಳಂತೆ ನಮ್ಮದು ಮಾದರಿ ಗ್ರಾಮವಾಗಲಿ ಎಂದು ಜನರು ಆಡಿಕೊಳ್ಳುತ್ತಿರುವುದು ಕೇಳಿಬಂತು .

ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಮೊಗವೀರ .ಉಪಾಧ್ಯಕ್ಷೆ ನಿರ್ಮಲಾ ಶೆಟ್ಟಿ .ಪಿಡಿಒ ಅಧಿಕಾರಿ.ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು. ಪಂಚಾಯಿತಿ ಸದಸ್ಯರು ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು .

Edited By : Manjunath H D
Kshetra Samachara

Kshetra Samachara

25/09/2021 10:38 am

Cinque Terre

4.74 K

Cinque Terre

0