ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಪೆರ್ಡೂರು ಪಿಡಿಒ ಬಂಗಲೆ ವಿವಾದ: ಕಾಂಗ್ರೆಸ್ ಬಿಜೆಪಿ ಪಾಲಿಟಿಕ್ಸ್ ಜೋರು!

ಪೆರ್ಡೂರು: ಜಿಲ್ಲಾ ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಲೋಕಲ್ ಪಾಲಿಟಿಕ್ಸ್ ಜೋರಾಗಿದೆ.

ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ ಪಿಡಿಒ ಒಬ್ಬರು ಕಟ್ಟಿಸಲು ಹೊರಟಿರುವ ಬಂಗಲೆ, ಈಗ ವಿವಾದದ ಕೇಂದ್ರಬಿಂದುವಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಸದಾಶಿವ ಸೇರ್ವೆಗಾರ್ 15 ಸೆಂಟ್ಸ್ ಜಾಗದಲ್ಲಿ ವಾಸ್ತವ್ಯದ ಮನೆ ನಿರ್ಮಾಣ ಮಾಡಲು ಕಟ್ಟಡ ಪರವಾನಿಗೆ ಪಡೆದುಕೊಂಡಿದ್ದಾರೆ. ಆದರೆ ಪರವಾನಿಗೆ ಪಡೆದುಕೊಂಡ ಜಾಗದಲ್ಲಿ ಮನೆ ನಿರ್ಮಾಣ ಮಾಡದೆ, ಸರಕಾರಿ ಭೂಮಿಯಲ್ಲಿ ಬೃಹತ್ ಬಂಗಲೆ ಕಟ್ಟಿಸುತ್ತಿದ್ದಾರೆ.

ಇದೊಂದು ಅರಣ್ಯ ಪ್ರದೇಶವಾಗಿದ್ದು, ಡೀಮ್ಡ್ ಫಾರೆಸ್ಟ್ ಗೆ ಒಳಪಟ್ಟ ಭೂಮಿಯಲ್ಲಿ ಬೃಹತ್ ಬಂಗಲೆ ತಲೆಯೆತ್ತುತ್ತಿದೆ. ಈ ಕಾನೂನುಬಾಹಿರ ನಿರ್ಮಾಣವನ್ನು, ಪೆರ್ಡೂರು ಪಂಚಾಯಿತಿಯ ಪಿಡಿಓ ಸುಮನಾ ಆಕ್ಷೇಪಿಸಿ ನೋಟಿಸ್ ನೀಡಿದ್ದರು. ಆದರೆ ಆಡಳಿತ ನಡೆಸುವ ಬಿಜೆಪಿ ಪಕ್ಷದ ಜನಪ್ರತಿನಿಧಿಗಳ ಮೂಲಕ ಒತ್ತಡ ತಂದು ಸುಮನಾರನ್ನು ಸದ್ಯ ಜಿಲ್ಲಾ ಪಂಚಾಯತ್ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಸುಮನಾ ಅವರು ದಲಿತ ಮಹಿಳೆಯಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಗೆ ಒಳಗಾದ ಈಕೆಗೆ, ನ್ಯಾಯ ಒದಗಿಸಿಕೊಡಬೇಕೆಂದು ಕಾಂಗ್ರೆಸ್ ನಾಯಕರು ಬೀದಿಗಿಳಿದಿದ್ದಾರೆ.

Edited By : Shivu K
Kshetra Samachara

Kshetra Samachara

20/09/2021 07:49 pm

Cinque Terre

29.87 K

Cinque Terre

3

ಸಂಬಂಧಿತ ಸುದ್ದಿ