ಮುಲ್ಕಿ: ಬಿಜೆಪಿ ಬೆಳ್ಳಾಯರು ಒಂದನೇ ವಾರ್ಡ್ ಸಮಿತಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಗಂಟೆಗೆ ಮನೆಮನೆಗೆ ತೆರಳಿ ಹೊಸ ಮತದಾರರ ಸೇರ್ಪಡೆ ಆಂದೋಲನ ನಡೆಯಿತು.
ಮಧ್ಯಾಹ್ನ ಬೆಳ್ಳಾಯರು ಪರಿಶಿಷ್ಟ ಪಂಗಡ ಕಾಲೋನಿಯ ಸಮಾಜ ಮಂದಿರದಲ್ಲಿ ಸಹ ಭೋಜನ ಕಾರ್ಯಕ್ರಮ ಹಾಗೂ ಬೆಳ್ಳಾಯರು ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ನಡೆಯಿತು. ಈ ಸಂದರ್ಭ ಬಿಜೆಪಿ ಜಿಲ್ಲಾ ಸಮಿತಿಯ ಸದಸ್ಯರಾದ ವಿನೋದ್ ಸಾಲ್ಯಾನ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಪ್ರಯುಕ್ತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯಶಸ್ವಿಯಾಗಿ ನಡೆದಿದೆ ಎಂದರು.
ಈ ಸಂದರ್ಭ ಪಡುಪಣಂಬೂರು ಗ್ರಾಪಂ ಸದಸ್ಯರಾದ ಪವಿತ್ರ, ವಿಜಯಲಕ್ಷ್ಮಿ, ಶ್ವೇತಾ, ಬಿಜೆಪಿ ನಾಯಕರಾದ ಲಕ್ಷ್ಮಣ್ ಸಾಲ್ಯಾನ್ ಪುನರೂರು, ಬೂತ್ ಅಧ್ಯಕ್ಷ ದಿವ್ಯೇಶ್, ಸ್ಥಳೀಯರಾದ ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು.
Kshetra Samachara
17/09/2021 07:13 pm