ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದೇವಸ್ಥಾನ ತೆರವು ಇದು ಟೂಲ್ ಕಿಟ್ ಷಡ್ಯಂತ್ರದ ಭಾಗವೇ ಎಂಬಾ ಅನುಮಾನವಿದೆ: ಗಣೇಶ್ ಕಾರ್ಣಿಕ್

ಮಂಗಳೂರು: 2009 ನೇ ಇಸವಿಯ ನಂತರ ಅಕ್ರಮವಾಗಿ ನಿರ್ಮಿಸಲಾದ ಧಾರ್ಮಿಕ ಕೇಂದ್ರಗಳನ್ನು ಸ್ಥಳೀಯರಿಗೆ ಮನವರಿಕೆ ಮಾಡಿ ತೆರವುಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆಯೇ ಹೊರತು ಹಳೆಯ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ಸೂಚಿಸಿಲ್ಲ ಎಂದು ಬಿಜೆಪಿಯ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿರುವ ಪುರಾತನ ದೇವಾಲಯವನ್ನು ಕದ್ದು ಮುಚ್ಚಿ ಒಡೆದಿರುವ ಕೃತ್ಯವನ್ನು ನಾನು ವೈಯಕ್ತಿಕವಾಗಿ ವಿರೋಧಿಸುತ್ತೇನೆ.

ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವುದಾಗಿ ಬಿಜೆಪಿಯ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಇನ್ನು ಮೈಸೂರಿನಲ್ಲಿ ಅಧಿಕಾರಿಗಳು ರಾತ್ರಿ ಹೊತ್ತು ಕಾರ್ಯಾಚರಣೆ ನಡೆಸುವ ಅಗತ್ಯ ಇರಲಿಲ್ಲ. ಇದು ಟೂಲ್ ಕಿಟ್ ಷಡ್ಯಂತ್ರದ ಭಾಗವೇ ಎಂಬ ಅನುಮಾನವಿದೆ.‌ಷಡ್ಯಂತ್ರದ ಭಾಗವಾಗಿ ವರ್ತಿಸಿದ್ದಾರೆ ಎಂಬ ಸಂದೇಹ ಇದೆ. ಮುಖ್ಯ ಕಾರ್ಯದರ್ಶಿಗಳು ಇದಕ್ಕೆ ಸ್ಪಷ್ಟೀಕರಣ ಕೊಡಬೇಕು. ಕೆಡವುವ ವಿಚಾರ ಮುಖ್ಯಮಂತ್ರಿ, ಉಸ್ತುವಾರಿ ಸಚಿವರ ಗಮನಕ್ಕೆ‌ ತಂದಿದ್ದಾರ..? ಎಂದು ಪ್ರಶ್ನಿಸಿದ ಅವರು,

ರಾತ್ರೋ ರಾತ್ರಿ ಕಳ್ಳರ ರೀತಿ‌ ಹೋಗಿ ಯಾಕೆ ನೆಲಸಮ ಮಾಡಬೇಕಿತ್ತು. ನೋಟಿಸ್, ಸಮಜಾಯಿಸಿ ಪ್ರಕ್ರಿಯೆ ಯಾಕೆ ಮಾಡಿಲ್ಲ. ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪತ್ರ ಬರೆಯುತ್ತೇನೆ ಅಂದರು.

Edited By :
Kshetra Samachara

Kshetra Samachara

16/09/2021 07:09 pm

Cinque Terre

7.35 K

Cinque Terre

8

ಸಂಬಂಧಿತ ಸುದ್ದಿ