ಉಡುಪಿ: ಮೈಸೂರಿನಲ್ಲಿ ದೇವಸ್ಥಾನ ದ್ವಂಸ ಪ್ರಕರಣಕ್ಕೆ ಸಂಬಂಧಪಟ್ಟು ಪ್ರತಿಕ್ರಿಯೆ ನೀಡಿರುವ ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ ,ಹಿಂದುತ್ವ ಫಸ್ಟ್ ಅಧಿಕಾರ ನೆಕ್ಸ್ಟ್ ಎಂದಿದ್ದ ಸುನಿಲ್ ಕುಮಾರ್ ಈಗೆಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಮೈಸೂರು ಘಟನೆಯ ಬಗ್ಗೆ ಸುನೀಲ್ ಕುಮಾರ್ ಯಾಕೆ ಮಾತನಾಡುತ್ತಿಲ್ಲ? ಸಚಿವರು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಇಂಧನ ಸಚಿವ ಸುನಿಲ್ ಕುಮಾರ್ ಮೌನ ಮುರಿದು ಮಾತನಾಡಬೇಕು.ಸುನೀಲ್ ಸದಾ ಹಿಂದುತ್ವದ ಬಗ್ಗೆ ಪುಂಖಾನುಪುಂಖ ಭಾಷಣ ಮಾಡುತ್ತಾರೆ.ಸಚಿವರೇ, ನೀವು ಈಗ ಯಾಕೆ ಮಾತನಾಡುತ್ತಿಲ್ಲ? ಚುನಾವಣೆ ಬಂದಾಗ ಮಾತ್ರ ನಿಮ್ಮ ಹಿಂದುತ್ವ ಪ್ರದರ್ಶನನಾ?ಎಂದು ಯೋಗೀಶ್ ಇನ್ನಾ ಪ್ರಶ್ನಿಸಿದ್ದಾರೆ.
Kshetra Samachara
16/09/2021 04:36 pm