ಮಂಗಳೂರು: ಕೋವಿಡ್ ಸಮಯದಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ನೀಡಿರುವ ಸುರಕ್ಷಾ ಕಿಟ್ ಅಸಮರ್ಪಕವಾಗಿದ್ದು, ಕಟ್ಟಡ ಕಾರ್ಮಿಕರ ಕಲ್ಯಾಣದ ಅನುದಾನ ಸಂಪೂರ್ಣ ದುರುಪಯೋಗವಾಗಿದೆ ಎಂದು ಶಾಸಕ ಖಾದರ್ ಆರೋಪಿಸಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಈ ಕಿಟ್ ನಿಷ್ಪ್ರಯೋಜಕವಾಗಿದ್ದು, ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ. ಆದ್ದರಿಂದ ಈ ಬಗ್ಗೆ ಸರ್ಕಾರ ತನಿಖೆ ಮಾಡಬೇಕು ಎಂದು ಹೇಳಿದರು.
ಈ ಕಿಟ್ ಜೊತೆಗೆ ಹ್ಯುಮಿನಿಟಿ ಕಿಟ್ ನೀಡಲಾಗಿದ್ದು, ಆದರೆ ಅದನ್ನು ಬಳಸುವುದು ಹೇಗೆ, ಯಾರು ಶಿಫಾರಸು ಮಾಡಿದರೆಂಬ ಸ್ಪಷ್ಟತೆಯಿಲ್ಲ. ಒಂದು ಕಿಟ್ ಗೆ 2,500-3000 ರೂ. ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಇದೆ. ಆದರೆ ಇಷ್ಟೊಂದು ಮೊತ್ತದ ವಸ್ತುಗಳ ಈ ಕಿಟ್ ನಲ್ಲಿ ಇಲ್ಲ. ಆದ್ದರಿಂದ ಈ ಬಗ್ಗೆ ಸರಿಯಾಗಿ ತನಿಖೆಯಾಗಲಿ ಎಂದು ಆಗ್ರಹಿಸಿದರು.
ದೇಶದಲ್ಲಿ ಜನರನ್ನು ಬಿಜೆಪಿ ಸರ್ಕಾರ ಮೋಸ ಮಾಡಿ ವಂಚಿಸುತ್ತಿದೆ. ಜನಪರವಾದ ಯಾವುದೇ ಒಂದು ಯೋಜನೆಯನ್ನು ಸರ್ಕಾರ ಜಾರಿಗೊಳಿಸುತ್ತಿಲ್ಲ. ಜನರಿಗೆ ಸಿಗಬೇಕಾದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ದ.ಕ ಜಿಲ್ಲೆಗೂ ಈ ಸರ್ಕಾರದಿಂದ ಮೋಸ ಆಗಿದೆ. ಮೀನುಗಾರಿಕೆಗೆ, ಇತರ ಯಾವುದೇ ಯೋಜನೆ ಈ ಭಾಗಕ್ಕೆ ಬಂದಿಲ್ಲ. ಬಜೆಟ್ ನಲ್ಲಿ ಈ ಭಾಗಕ್ಕೆ ಈ ಹಿಂದೆ ಘೋಷಿಸಿದ ಅನುದಾನ ಇನ್ನೂ ಬಂದಿಲ್ಲ. ಈ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು ಮಾತನಾಡಬೇಕಿದೆ. ಆದರೆ ಆಡಳಿತ ಪಕ್ಷದ ಶಾಸಕರು ಮನವಿ ನೀಡುವುದರಲ್ಲಿ ಬಿಜಿ ಆಗಿದ್ದಾರೆ ಎಂದು ಯು.ಟಿ.ಖಾದರ್ ಹೇಳಿದರು.
Kshetra Samachara
12/09/2021 06:36 pm