ಕಾರ್ಕಳ: ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಡ್ರಗ್ಸ್ ದಂಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಸುನಿಲ್ ಕುಮಾರ್ ,
ರಾಜ್ಯ ಸರ್ಕಾರ ಮಾದಕ-ದ್ರವ್ಯ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಬೊಮ್ಮಾಯಿಯವರು ಗೃಹ ಸಚಿವರಾಗಿದ್ದಾಗ ಡ್ರಗ್ಸ್ ಗೆ ಕಡಿವಾಣ ಹಾಕಿದ್ದರು.ಅಂದಿನ ಕಠಿಣ ನಿಯಮದಿಂದ ಎಲ್ಲಾ ಪ್ರಕರಣಗಳು ಹೊರಬರುತ್ತಿವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ಪರಂಪರೆ ಒಂದೆರಡು ವರ್ಷದ್ದಲ್ಲ ಎಂದು ಅಭಿಪ್ರಾಯಪಟ್ಟ ಸಚಿವರು , ತನಿಖೆ ಯಾರ ಮನೆಯ ಬಳಿ ಬಂದರೂ ಅದನ್ನು ಎದುರಿಸಲೇಬೇಕು.
ಡ್ರಗ್ಸ್ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಮಾದಕ ವ್ಯಸನಕ್ಕೆ ನನ್ನ ಮನೆಯ ಮಕ್ಕಳು ಒಳಗಾಗಬಾರದು.
ಇನ್ನೊಬ್ಬರ ಮನೆಯ ಮಕ್ಕಳೂ ಪಾಲ್ಗೊಳ್ಳಬಾರದು.
ಭವಿಷ್ಯದ ಸಮಾಜದ ದೃಷ್ಟಿಯಿಂದ ರಾಜ್ಯವು ಡ್ರಗ್ಸ್ ಮುಕ್ತ ಆಗಬೇಕು ಎಂದು ಕಾರ್ಕಳದಲ್ಲಿ ಇಂಧನ ,ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
Kshetra Samachara
09/09/2021 09:11 pm