ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸ್ವಯಂ ನಿಯಂತ್ರಣ ಹಾಕಿ ಹಬ್ಬ ಆಚರಿಸಿ: ಸಮಾರಂಭದಿಂದಾಗಿ ಕೊರೋನಾ ಹರಡಬಾರದು: ಸಚಿವ ಸುನಿಲ್ ಕುಮಾರ್ ಮನವಿ

ಕಾರ್ಕಳ: ಗಣೇಶ ಹಬ್ಬಕ್ಕೆ ಅಡ್ಡಿ ಮಾಡಿದರೆ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರಕಾರಕ್ಕೆ ಶ್ರೀರಾಮ ಸೇನೆ ಎಚ್ಚರಿಕೆ ನೀಡಿದೆ.ಈ ಕುರಿತು ಕಾರ್ಕಳದಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಸುನೀಲ್ ಕುಮಾರ್ ,ಗಣೇಶೋತ್ಸವ ವಿಜೃಂಭಣೆಯಿಂದ ಆಚರಣೆ ಮಾಡಲು ನಮ್ಮ ಅಡ್ಡಿ ಇರಲಿಲ್ಲ.

ಕೊರೋನಾ ಸಂದರ್ಭ ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಸ್ವಯಂ ನಿಯಂತ್ರಣ ಹಾಕಿಕೊಳ್ಳಲು ಪ್ರಧಾನಿ ಮೋದಿ ಹಿಂದೆಯೇ ಕರೆ ನೀಡಿದ್ದಾರೆ. ಹಬ್ಬ ಆಚರಿಸುವವರು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು ಎಂದು ಹೇಳಿದ್ದಾರೆ.

ನಮ್ಮ ಕಾರ್ಯಕ್ರಮಗಳಿಂದ ಯಾರಿಗೂ ಅಡ್ಡಿಯಾಗಬಾರದು ಎಂದು ಹೇಳಿದ ಸುನಿಲ್ ಕುಮಾರ್ , ಸಮಾರಂಭದ ಮೂಲಕ ಕೊರೋನಾ ಹರಡಬಾರದು.

ಸ್ವಯಂ ಅನುಶಾಸನವನ್ನು ಎಲ್ಲರೂ ಹಾಕಿಕೊಳ್ಳುವ ಅನಿವಾರ್ಯಯತೆ ಇದೆ ಎಂದು ಇಂಧನ, ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಮನವಿ ಮಾಡಿದ್ದಾರೆ.

Edited By : Shivu K
Kshetra Samachara

Kshetra Samachara

09/09/2021 08:54 pm

Cinque Terre

7.21 K

Cinque Terre

0

ಸಂಬಂಧಿತ ಸುದ್ದಿ