ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ತ್ರಿಚಕ್ರ ವಾಹನ ವಿತರಣೆ

ಉಡುಪಿ: ಶೇಕಡ 5 ರ ಅಂಗವಿಕಲರ ಮೀಸಲಾತಿಯಡಿ ಶೇಕಡಾ 75ಕ್ಕೂ ಅಧಿಕ ಅಂಗವಿಕಲತೆಯನ್ನು ಹೊಂದಿರುವ ಮತ್ತು ಕೈ ಸ್ವಾಧೀನವಿರುವ ಮಾನಸಿಕವಾಗಿ ಸ್ವಸ್ಥರಿರುವವರಿಗೆ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 85,000 ರೂ ಮಂಜೂರಾಗಿದೆ.ಈ ಮೊತ್ತದ ತ್ರಿಚಕ್ರ ವಾಹನವನ್ನು ಫಲಾನುಭವಿಗಳಾದ ಹೇರೂರು ಗ್ರಾಮದ ನಿವಾಸಿ ದತ್ತಾತ್ರೇಯ ಮಲ್ಯ ಅವರಿಗೆ ಶಾಸಕರಾದ ಕೆ. ರಘುಪತಿ ಭಟ್ ರವರು ಇಂದು ಉಡುಪಿ ಶಾಸಕರ ಕಚೇರಿಯಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳಾದ ರತ್ನ ಸುವರ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

09/09/2021 05:23 pm

Cinque Terre

12.11 K

Cinque Terre

1