ಉಡುಪಿ: ಉಡುಪಿ ಜಿಲ್ಲಾ ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೇಕಲ್ಲು ಅವರು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯವರ ಮಾತಿನಿಂದ ಬೇಸತ್ತು ಸಂಘಟನೆಗೆ ಒಂದು ವಾರದಿಂದ ಹಿಂದೆಯೇ ರಾಜೀನಾಮೆ ನೀಡಿದ್ದಾರೆ.
ಆದರೆ ಸಂಘಟನೆಯ ರಾಜ್ಯ ನಾಯಕರು ಜಿಲ್ಲಾ ಪದಾಧಿಕಾರಿಗಳನ್ನು ಸಂಪರ್ಕಿಸದೆ ಇರುವುದರಿಂದ ಬೇಸತ್ತು , ಜಿಲ್ಲಾಧ್ಯಕ್ಷರ ಮನವೊಲಿಕೆಗೆ ಪ್ರಯತ್ನಿಸದಿರುವುದನ್ನು ಮನಗಂಡು ಶ್ರೀರಾಮಸೇನೆಯ ಉಡುಪಿ ಜಿಲ್ಲಾ ಪದಾಧಿಕಾರಿಗಳು ಅತೀವ ನೋವಿನಿಂದ ಸಂಘಟನೆಗೆ ಸಾಮೂಹಿಕ ರಾಜೀನಾಮೆಯನ್ನು ನೀಡುತ್ತಿದ್ದೇವೆ. ಹಾಗೂ ಉಡುಪಿ ಜಿಲ್ಲಾ ಶ್ರೀ ರಾಮಸೇನೆಯನ್ನು ಬರ್ಕಾಸ್ತು ಮಾಡುತ್ತಿರುವುದಾಗಿ ಸಂಘಟನೆಯ ಜಿಲ್ಲಾ ವಕ್ತಾರ ಶರತ್. ಕೆ ಮಣಿಪಾಲ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Kshetra Samachara
02/09/2021 04:50 pm