ಬೈಂದೂರು: ಸಂಸದ ಬಿ.ವೈ ರಾಘವೇಂದ್ರ ಅವರು ಬೈಂದೂರಿನಲ್ಲಿ ಅಧಿಕಾರಿಗಳ ಸಭೆಯಲ್ಲಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಚುರುಕು ಮುಟ್ಟಿಸಿದರು.
ಸಂಸದ ರಾಘವೇಂದ್ರ ಅವರು ಮಾತನಾಡಿ ಜವುಳಿ ಪಾರ್ಕ್, ಪೀಠೋಪಕರಣ ತಯಾರಿ ಸಂಕೀರ್ಣ, ಕ್ರೀಡಾ ಸಂಕೀರ್ಣ, ನ್ಯಾಯಾಲಯ, ಕ್ರೀಡಾಂಗಣ, ವಸತಿ ಶಾಲೆಗಳೀಗೆ ಜಮೀನು ಗುರುತಿಸಬೇಕು. ಮೂಕಾಂಬಿಕಾ ವನ್ಯಪ್ರಾಣಿ ಸಂರಕ್ಷಣಾ ತಾಣ, ಮರಿನಾ, ಬೀಚ್‍ವಾಕ್, ಉದ್ಯಾನವನ, ವಿಶ್ರಾಂತಿ ತಾಣ ನಿರ್ಮಾಣ ಯೋಜನೆಗಳು ಬರಲಿದ್ದು, ಅವುಗಳ ಅನುಷ್ಠಾನಕ್ಕೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು. ವೈದ್ಯಕೀಯ ಕಾಲೇಜಿಗೆ ಹಣ ಹೂಡಲು ಒಬ್ಬರು ಮುಂದಾಗಿದ್ದು, ಅದಕ್ಕೂ ಸ್ಥಳ ಮೀಸಲಿಡಲು ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಯೋಜನೆ ಅಗತ್ಯ ಎನಿಸಿದರೆ, ಹಣ ಮಂಜೂರು ಮಾಡಲಾಗುವುದು ಎಂದರು.
ಬೈಂದೂರುತಹಶೀಲ್ದಾರ್ ಶೋಭಾಲಕ್ಷ್ಮೀ , ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ, ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ, ಮೀನುಗಾರಿಕಾ ಇಲಾಖೆಯ ಎಂಜಿನಿಯರ್ ಗಣೇಶ್, ರಾಜ್ಯ ಯೋಜನಾ ಸಮಿತಿ ಸದಸ್ಯೆ ಪ್ರಿಯದರ್ಶಿನಿ, ಬಿಜೆಪಿ ವಲಯಾಧ್ಯಕ್ಷ ದೀಪಕ್‍ಕುಮಾರ ಶೆಟ್ಟಿ ಉಪಸ್ಥಿತದ್ದರು.
Kshetra Samachara
02/09/2021 04:32 pm