ಉಡುಪಿ: ಉಡುಪಿ ಜಿಲ್ಲೆಗೂ ವೀಕೆಂಡ್ ಕರ್ಪ್ಯೂ ವಿಸ್ತರಣೆ ಮಾಡಿದ್ದಕ್ಕೆ ಶಾಸಕ ರಘುಪತಿ ಭಟ್ ಆಕ್ಷೇಪ ಎತ್ತಿದ್ದಾರೆ. ಉಡುಪಿ ಗಡಿ ಜಿಲ್ಲೆಗಳ ಸಾಲಿಗೆ ಸೇರುವುದಿಲ್ಲ ಎಂದ ಅವರು, ಉಡುಪಿ ಜಿಲ್ಲೆಯನ್ನು ವೀಕೆಂಡ್ ಕರ್ಫ್ಯೂ ನಿಂದ ಹೊರಗಿಡಬೇಕು. ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಿದೆ. ಪಾಸಿಟಿವಿಟಿ ರೇಟ್ ಈಗ 1.5 ಕ್ಕೆ ಇಳಿಕೆಯಾಗಿದೆ. ಜಿಲ್ಲೆಯ ಜನರು ಕಟ್ಟುನಿಟ್ಟಾಗಿ ಕೋವಿಡ್ ನಿಯಮ ಪಾಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ದಿನಕ್ಕೆ ಹತ್ತು ಸಾವಿರದಷ್ಟು ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ಕರ್ಫ್ಯೂ ವಿಧಿಸಿದರೆ ವ್ಯಾಪಾರಸ್ಥರಿಗೆ ಮತ್ತೊಮ್ಮೆ ಸಮಸ್ಯೆಯಾಗುತ್ತದೆ
ಈ ಬಗ್ಗೆ ನಾನು ಸರ್ಕಾರಕ್ಕೆ ಆಗ್ರಹಿಸುತ್ತೇನೆ.ಸಚಿವ ಸುನಿಲ್ ಕುಮಾರ್ ಅವರ ಜೊತೆಯೂ ಚರ್ಚಿಸಿದ್ದೇನೆ. ಸಚಿವ ಸುನಿಲ್ ಕೂಡ ನನ್ನ ನಿಲುವು ಒಪ್ಪಿದ್ದಾರೆ.ಆರೋಗ್ಯ ಸಚಿವರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಶಾಲೆಗಳು ಕೂಡ ಆರಂಭವಾಗಿರುವುದರಿಂದ ಕರ್ಪ್ಯೂ ಸರಿಯಲ್ಲ.ನಮ್ಮಲ್ಲಿ ಶೇ 70 ಮೊದಲ ಡೋಸ್ ಹಾಗೂ ಶೇ 30 ಎರಡನೇ ಡೋಸ್ ಲಸಿಕೆ ಆಗಿದೆ. ವ್ಯಾಕ್ಸಿನೇಶನ್ ಆದ ಮೇಲೂ ಕರ್ಪ್ಯೂ ಜಾರಿಯಾದರೆ ಜನರು ವಿಶ್ವಾಸ ಕಳೆದುಕೊಳ್ಳುತ್ತಾರೆ.
ಗಡಿ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಸರಿಯಾದ ನಿರ್ಧಾರ. ಆದರೆ ಉಡುಪಿ ಜಿಲ್ಲೆಗೆ ಸರಿಯಲ್ಲ ಎಂದು ಪುನರುಚ್ಚರಿಸಿದ್ದಾರೆ.
Kshetra Samachara
01/09/2021 02:22 pm